ಬಿಜೆಪಿಯಿಂದ ‘ಕೊರೋನಾ ರಾಜಕೀಯ’ । ಬಿಹಾರ ಚುನಾವಣಾ ಪ್ರಣಾಳಿಕೆಯಲ್ಲಿ ಉಚಿತ ಲಸಿಕೆ ನೀಡುವ ಭರವಸೆ !

Prasthutha|

► ಕೊರೋನಾ ಫಲವತ್ತತೆಯ ‘ಭೂಮಿ’ಯಲ್ಲಿ ಬಿಜೆಪಿಯಿಂದ ಲಸಿಕೆಯ ‘ಉಳುಮೆ’

ಕೊರೋನಾ ಮಹಾಮಾರಿ ದೇಶದ ಹಲವು ಜನರ ಸುಂದರ ಬದುಕಿನಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.  ಆದರೆ ಬಿಜೆಪಿಗೆ ಅದ್ಯಾವುದೂ ಮುಖ್ಯವಾಗಿಲ್ಲ. ಬಿಜೆಪಿ ಅದೇ ಕೊರೋನಾ ಮಹಾಮಾರಿಯನ್ನೇ ತನಗೆ ರಾಜಕೀಯ ಲಾಭ ತಂದುಕೊಡುವ ಅಸ್ತ್ರವನ್ನಾಗಿಸುವ ತವಕದಲ್ಲಿದೆ. ಜಗತ್ತು ಇನ್ನೂ ಕೊರೋನಾಗೆ ಅಧಿಕೃತವಾಗಿ ಲಸಿಕೆ ಕಂಡು ಹಿಡಿಯದಿದ್ದರೂ  ಬಿಜೆಪಿ ಮಾತ್ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ಉಚಿತ ಕೊರೋನಾ ಲಸಿಕೆ ನೀಡುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಬಿಜೆಪಿಯ ಕುರಿತಂತೆ ಜನರಿಗೆ ವಾಸ್ತವ ತಿಳಿಯಲು ಇದೊಂದು ಪ್ರಣಾಳಿಕೆಯೇ ಸಾಕು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಣಾಳಿಕೆ ಸಾಮಾಜಿಕ ತಾಣಗಳಲ್ಲಿ ಅದಾಗಲೇ ಟ್ರೋಲ್ ಗೆ ಒಳಗಾಗಿದೆ.

- Advertisement -

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್, ಹಿರಿಯ ನಾಯಕರಾದ ಭೂಪೇಂದ್ರ ಯಾದವ್ ಸೇರಿದಂತೆ ಇತರೆ ಹಲವು ನಾಯಕರು ಇಂದು ಬಿಡುಗಡೆ ಮಾಡಿರುವ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯು ಬಿಜೆಪಿಯ ಪೊಳ್ಳು ಭರವಸೆಗಳಿಗೆ ಮತ್ತೊಂದು ಉದಾಹರಣೆಯಂತಿದೆ. ಇಡೀ ಜಗತ್ತು ಇನ್ನೂ ಕೊರೋನಾ ನಿಗ್ರಹಕ್ಕೆ ಹರಸಾಹಸ  ಪಡುತ್ತಿದೆ. ಆದರೆ ಕೊರೋನಾ ಕಾರಣದಿಂದ ಫಲವತ್ತಾಗಿರುವ ಚುನಾವಣಾ ಭೂಮಿಯಲ್ಲಿ ಬಿಜೆಪಿ ಮಾತ್ರ ತನ್ನ ಉಳುಮೆ ಮಾಡಲು ತಯಾರಾಗಿದೆ.

- Advertisement -