Home ಟಾಪ್ ಸುದ್ದಿಗಳು BJP – RSS ರಾಜ್ಯ ನಾಯಕರ ಹವಾಲಾ ದಂಧೆಯ ಕುರಿತು ತನಿಖೆ ನಡೆಯಲಿ – ಕ್ಯಾಂಪಸ್...

BJP – RSS ರಾಜ್ಯ ನಾಯಕರ ಹವಾಲಾ ದಂಧೆಯ ಕುರಿತು ತನಿಖೆ ನಡೆಯಲಿ – ಕ್ಯಾಂಪಸ್ ಫ್ರಂಟ್ ಇ-ಮೇಲ್ ಅಭಿಯಾನ

ಕೇರಳದ ಬಿಜೆಪಿ-ಆರ್‌ಎಸ್‌ಎಸ್‌ ನ ರಾಜ್ಯ ನಾಯಕರು 3.5 ಕೋಟಿ ಹವಾಲಾದಲ್ಲಿ ಭಾಗಿಯಾಗಿದ್ದು, ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೋಮು ಹಿಂಸಾಚಾರವನ್ನು ಪ್ರಚೋದಿಸಲು ಮತ್ತು ವಿಧ್ವಂಸಕ ಕೃತ್ಯ ನಡೆಸಲು ಬಳಸಲಾಗಿತ್ತು.ಇದರ ಬಗ್ಗೆ ಈಡಿಯು ತನಿಖೆ ನಡೆಸಬೇಕು, ಈಡಿ ಆಯ್ದ ಕೆಲವೊಂದು ಕೇಂದ್ರ ಸರ್ಕಾರದ‌ ವಿರುದ್ಧ ಧ್ವನಿಯೆತ್ತುವವರನ್ನು ಮಾತ್ರ ಭೇಟೆಯಾಡುತ್ತಿದೆ.

ಇಂತಹ ಗಂಭೀರ ಪ್ರಕರಕರಣಗಳನ್ನು ಈಡಿಯು ಮರೆಮಾಚುತ್ತಿದೆ, ಈ ವಿಚಾರವಾಗಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ‘ಬಿಜೆಪಿ ಹವಾಲಾ ಕಾಣಿಸಿಕೊಂಡಾಗ ಈಡಿ ಕಣ್ಮರೆಯಾಯಿತು’ ಎಂಬ ಸಾಮೂಹಿಕ ಮೇಲಿಂಗ್ ಅಭಿಯಾನವನ್ನು ನಡೆಸಿದ್ದು , ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಇದರ ಬಗ್ಗೆ ಸೂಕ್ತ ತನಿಖೆ ನಡೆಸಲು ಈ ಮೇಲ್ ಮುಖಾಂತರ ಒತ್ತಾಯಿಸಲಾಯಿತು. ರಾಜ್ಯದಿಂದ ಸುಮಾರು ಸಾವಿರಾರು ಈ ಮೇಲ್ ಗಳನ್ನು ವಿದ್ಯಾರ್ಥಿಗಳು, ನಾಗರಿಕರು ಕಳುಹಿಸಿದ್ದಾರೆ.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕುಂದಾಪುರ ಜಿಲ್ಲಾ ಸಮಿತಿ ವತಿಯಿಂದ ನಡೆದ ಅಭಿಯಾನದಲ್ಲಿ ಕುಂದಾಪುರ ಜಿಲ್ಲಾ ಸಮಿತಿ ಸದಸ್ಯರಾದ ಸಹದ್ ಬಸ್ರೂರ್ , ಮುಜಾಹಿದ್ , ಸಿಂಹಾನ ,ಶಾಹಿದ್ ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು. ಉಡುಪಿಯಲ್ಲಿ ನಡೆದ ಅಭಿಯಾನದಲ್ಲಿ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷರಾದ ಅಸೀಲ್ ಅಕ್ರಮ್, ಕಾರ್ಯದರ್ಶಿ ಮಸೂದ್ ಮನ್ನಾ ಮತ್ತು ಜಿಲ್ಲಾ ಸಮಿತಿ ಸದಸ್ಯರು ಹಾಗೂ ವಿಧ್ಯಾರ್ಥಿಗಳು ಭಾಗವಹಿಸಿದ್ದರು.

Join Whatsapp
Exit mobile version