ಜನಾದೇಶ ಅರ್ಥ ಮಾಡಿಕೊಳ್ಳದೆ ಬಿಜೆಪಿ ನಾಯಕರು UCC ಅನುಷ್ಠಾನದ ಬಗ್ಗೆ ಮಾತಾಡುತ್ತಾರೆ: SDPI

Prasthutha|

ಬೆಂಗಳೂರು: ಜನಾದೇಶ ಅರ್ಥಮಾಡಿಕೊಳ್ಳದೆ ಬಿಜೆಪಿ ನಾಯಕರು UCC ಅನುಷ್ಠಾನದ ಬಗ್ಗೆ ಮಾತಾಡುತ್ತಾರೆ ಎಂದು SDPI ರಾಷ್ಟ್ರೀಯ ಅಧ್ಯಕ್ಷ ಎಂ.ಕೆ ಫೈಝಿ ಹೇಳಿದ್ದಾರೆ.

- Advertisement -

ಸಾಮಾಜಿಕ ಮಾಧ್ಯಮದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಅವರು, ಭಾರತದ ಜನರು ತಮ್ಮ ಜನಾದೇಶದ ಮೂಲಕ ಮೋದಿಯವರ ಗ್ಯಾರಂಟಿಗಳಾದ UCC, CAA ಮುಂತಾದವನ್ನು ತಿರಸ್ಕರಿಸಿದ್ದಾರೆ. ಇವುಗಳನ್ನು ಜಾರಿ ಮಾಡಲು ಬೇಕಾದ ಬಹುಮತವನ್ನು ಜನರು ಬಿಜೆಪಿಗೆ ನೀಡಲಿಲ್ಲ ಎಂದಿದ್ದಾರೆ.

ಆದರೆ ಬಿಜೆಪಿ ನಾಯಕರು ಆ ಜನಾದೇಶವನ್ನು ಅರ್ಥಮಾಡಿಕೊಂಡಿಲ್ಲವೆಂದು ಕಾಣುತ್ತದೆ. ಹಾಗಾಗೆ UCC (ಸಮಾನ ನಾಗರಿಕ ಸಂಹಿತೆ) ಅನುಷ್ಠಾನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಫೈಝಿ ಹೇಳಿದ್ದಾರೆ.

Join Whatsapp
Exit mobile version