Home ಟಾಪ್ ಸುದ್ದಿಗಳು PSI ನೇಮಕಾತಿಯಲ್ಲಿ ಅಕ್ರಮ: ಬಿಜೆಪಿ ನಾಯಕಿಯ ಪತಿ ಬಂಧನ !

PSI ನೇಮಕಾತಿಯಲ್ಲಿ ಅಕ್ರಮ: ಬಿಜೆಪಿ ನಾಯಕಿಯ ಪತಿ ಬಂಧನ !

ಕಲಬುರಗಿ: ರಾಜ್ಯದ 545 ಪಿಎಸ್ ಐ ಹುದ್ದೆ ನೇಮಕಾತಿಯಲ್ಲಿ ನಡೆದ ಅಕ್ರಮ ವಿಚಾರಕ್ಕೆ ಸಂಬಂಧಿಸಿ ಮತ್ತೊಬ್ಬ ಆರೋಪಿಯನ್ನು ಸಿಐಡಿ ತಂಡ ಬಂಧಿಸಿದೆ.

ಕಳೆದ ರಾತ್ರಿ ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಪತಿ ರಾಜೇಶ್ ಹಾಗರಗಿಯನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ಈವರೆಗೆ 8 ಆರೋಪಿಗಳ ಬಂಧನವಾಗಿದೆ. ನಿನ್ನೆ ಮಧ್ಯಾಹ್ನ ಪರೀಕ್ಷಾ ಅಕ್ರಮ ನಡೆದಿರುವ ಜ್ಞಾನಜೋತಿ ಶಾಲೆ ಮುಖ್ಯಸ್ಥೆ ದಿವ್ಯಾ ಹಾಗರಗಿ ಮನೆ ಮೇಲೆ ದಾಳಿ ನಡೆಸಿದ್ದ ಸಿಐಡಿ ತಂಡ ತನಿಖೆಗೆ ಅಸಹಕಾರ, ಆರೋಪಿಗಳ ನಾಪತ್ತೆಗೆ ಬೆಂಬಲ ಆರೋಪದ ಮೇಲೆ ರಾಜೇಶ್ ಹಾಗರಗಿಯನ್ನು ಬಂಧಿಸಿದ್ದಾರೆ. ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

Join Whatsapp
Exit mobile version