Home ಟಾಪ್ ಸುದ್ದಿಗಳು ಶ್ರೀನಿವಾಸಗೌಡ ಹತ್ಯೆಗೆ ಯತ್ನ: ಬಿಜೆಪಿ ಮುಖಂಡನ ಆಪ್ತರ ಬಂಧನ

ಶ್ರೀನಿವಾಸಗೌಡ ಹತ್ಯೆಗೆ ಯತ್ನ: ಬಿಜೆಪಿ ಮುಖಂಡನ ಆಪ್ತರ ಬಂಧನ

ಹೈದರಾಬಾದ್: ರಾಜ್ಯದ ಅಬಕಾರಿ, ಪ್ರವಾಸೋದ್ಯಮ ಸಚಿವ ವಿ.ಶ್ರೀನಿವಾಸ ಗೌಡ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದಲ್ಲಿ ಬಿಜೆಪಿ ಮುಖಂಡ ಎ.ಪಿ. ಜಿತೇಂದರ್ ರೆಡ್ಡಿ ಎಂಬಾತನ ಐವರು ಆಪ್ತರನ್ನು ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

ಮೆಹಬೂಬ್ ನಗರದ ನಿವಾಸಿಗಳಾದ ಶ್ರೀನಿವಾಸ ಗೌಡ ಮತ್ತು ಜಿತೇಂದರ್ ರೆಡ್ಡಿ ಕೆಲಕಾಲ ರಾಜಕೀಯ ಪ್ರತಿಸ್ಪರ್ಧಿಗಳಾಗಿದ್ದರು.

ಘಟನೆಗೆ ಸಂಬಂಧಿಸಿದಂತೆ ಸೈದಾಬಾದ್ ಪೊಲೀಸ್ ಕಮೀಷನರ್ ಸ್ಟೀಪನ್ ರವೀಂದ್ರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, ರೆಡ್ಡಿ ಸಹಚರರಾದ ಮಧುಸೂದನ್ ರಾಜು ಮತ್ತು ಅಮರೇಂದರ್ ರಾಜು ಎಂಬವರು ಆರೋಪಿಗಳನ್ನು ಬಿಡುಗಡೆಗೊಳಿಸಲು 15 ಕೋಟಿ ಲಂಚ ನೀಡಲು ಮುಂದಾಗಿದ್ದರು. ಈ ಸಂಬಂಧ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳಿಂದ 9 ಎಂ.ಎಂ ಪಿಸ್ತೂಲ್, ದೇಶಿ ನಿರ್ಮಿತ ರಿವಾಲ್ವರ್ ಮತ್ತು ಎರಡು ಜೀವಂತ ಗುಂಡುಗಳನ್ನು ವಶಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫಾರೂಕ್ ಮತ್ತು ಹೈದರ್ ಅಲಿ ಎಂಬವರು ಪೆಟ್ ಬಶೀರಾಬಾದ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದಲ್ಲಿ ಮೇಲಿನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಲಾಗಿದೆ.

ಈ ಮಧ್ಯೆ ಶ್ರೀನಿವಾಸ್ ಗೌಡ ಎಂಬವರ ಹತ್ಯೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಣೂರು ರವಿ, ಮಧುಸೂಧನ್ ರಾಜು, ರಾಘವೇಂದ್ರ ರಾಜು, ಅಮರೇಂದ್ರ ರಾಜು ಎಂಬವರಿಗೆ ಬಿಜೆಪಿ ಮುಖಂಡ ರೆಡ್ಡಿ, ವ್ಯವಸ್ಥೆಗೊಳಿಸಿ ಆಶ್ರಯ ನೀಡಿದ್ದರು ಎಂದು ಆರೋಪಿಸಲಾಗಿದೆ.

Join Whatsapp
Exit mobile version