Home ಟಾಪ್ ಸುದ್ದಿಗಳು ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ


ದುರ್ಗಾಪುರ: ಬಿಜೆಪಿ ಮುಖಂಡನೋರ್ವನನ್ನು ದುಷ್ಕರ್ಮಿಗಳ ತಂಡವೊಂದು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಶನಿವಾರ ಸಂಜೆ ಶಕ್ತಿಗಢದಲ್ಲಿ ನಡೆದಿದೆ.

ರಾಜೇಶ್ ಅಲಿಯಾಸ್ ರಾಜು ಝಾ ಕೊಲೆಯಾದ ಬಿಜೆಪಿ ಮುಖಂಡ.

ರಾಜು ಝಾ ಅವರು ತಮ್ಮ ಕಾರಿನಲ್ಲಿ ಕೋಲ್ಕತ್ತಾಗೆ ಹೋಗುತ್ತಿದ್ದಾಗ, ಶಕ್ತಿಗಢದಲ್ಲಿ ಅವರ ಕಾರಿನ ಪಕ್ಕದಲ್ಲಿ ಮತ್ತೊಂದು ವಾಹನ ಬಂದು ನಿಂತಿತು. ಕಾರಿನೊಳಗಿದ್ದ ದುಷ್ಕರ್ಮಿಗಳು ರಾಜು ಝಾ ಅವರನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು. ಮೂರು ಗುಂಡುಗಳು ರಾಜು ದೇಹ ಹೊಕ್ಕಿವೆ. ಇದರಿಂದ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಈ ಬಗ್ಗೆ ದೂರು ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಜಾಲ ಬೀಸಿದ್ದಾರೆ.

Join Whatsapp
Exit mobile version