Home ಟಾಪ್ ಸುದ್ದಿಗಳು ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಸಹಜವಲ್ಲ, ಅದು ಕೊಲೆ: ಸಹೋದರಿ ಅನುಮಾನ

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಸಹಜವಲ್ಲ, ಅದು ಕೊಲೆ: ಸಹೋದರಿ ಅನುಮಾನ

ಗೋವಾ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು ಸಹಜ ಸಾವಲ್ಲ. ಇದೊಂದು ವ್ಯವಸ್ಥಿತ ಕೊಲೆ ಎಂದು ಸೋನಾಲಿ ಸಹೋದರಿ ರಾಮನ್ ಫೋಗಟ್ ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾತ್ರಿ 11 ಗಂಟೆಗೆ ಸೋನಾಲಿ ಅನಾರೋಗ್ಯದಿಂದ ಬಳಲುತ್ತಿದ್ದರು. ಊಟ ಮಾಡಿದ ಬಳಿಕ ಸಂಕಟವಾಗುತ್ತಿದೆ ಎಂಬುದಾಗಿ ತಾಯಿಗೆ ಫೋನ್ ಮಾಡಿ ಹೇಳಿದ್ದರು. ಬೆಳಗ್ಗೆ ವೈದ್ಯರ ಬಳಿ ಹೋಗಿ ಔಷಧಿ ಪಡೆದುಕೊಳ್ಳೋಣ ಎಂದು ಹೇಳಿ ಸಮಾಧಾನಪಡಿಸಿದ್ದೆವು. ಆದರೆ ಬೆಳಗ್ಗೆ ವೇಳೆಗೆ ಅವರು ಮೃತಪಟ್ಟಿರುವ ಸುದ್ದಿ ಕೇಳಿ ಅಚ್ಚರಿಯಾಯಿತು. ರಾತ್ರಿ ಅವರು ಸೇವಿಸಿದ ಊಟದಲ್ಲಿಯೇ ಏನೋ ಅನುಮಾನವಿದೆ. ಇದೊಂದು ವ್ಯವಸ್ಥಿತ ಕೊಲೆ ಎಂದವರು ಶಂಕಿಸಿದ್ದಾರೆ.

Join Whatsapp
Exit mobile version