ಉತ್ತರ ಪ್ರದೇಶ: ಬಿಜೆಪಿ ನಾಯಕನ ಗುಂಡಿಕ್ಕಿ ಹತ್ಯೆ

ಫಿರೋಝಾಬಾದ್: ಉತ್ತರ ಪ್ರದೇಶದಲ್ಲಿ ಕಳೆದ ರಾತ್ರಿ ಸ್ಥಳಿಯ ಬಿಜೆಪಿ ನಾಯಕ ದಯಾಶಂಕರ್ ಗುಪ್ತಾ ಎಂಬಾತನನ್ನು ಗುಂಡಿಕ್ಕಿ ಹತ್ಯ ಮಾಡಲಾಗಿದೆ. ರಾಜಕೀಯ ವೈರತ್ವದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆಯೆಂದು ದಯಾಶಂಕರ್ ಕುಟುಂಬ ಆರೋಪಿಸಿದೆ.

 ಈ ಹಿನ್ನೆಲೆಯಲ್ಲಿ ದಯಾಶಂಕರ್ ಸಹೋದ್ಯೋಗಿ ವೀರೇಶ್ ಥೋಮರ್ ಮತ್ತು ಥಾಮರ್ ನ ಸೋದರ್ ಮಾವಂದಿರಾದ ನರೇಂದ್ರ ಥೋಮರ್ ಮತ್ತು ದೇವೇಂದ್ರ ಥೋಮರ್ ರನ್ನು ಈ ಸಂಬಂಧ ಬಂಧಿಸಲಾಗಿದೆ.

- Advertisement -

ಮಂಡಲ್ ಉಪಾಧ್ಯಕ್ಷರಾಗಿದ್ದ ದಯಾಶಂಕರ್ ಗುಪ್ತಾ, ಕಳೆದ ರಾತ್ರಿ ತನ್ನ ಅಂಗಡಿ ಮುಚ್ಚುವ ವೇಳೆ ಸ್ಥಳೀಯ ಮಾರುಕಟ್ಟೆಯಲ್ಲಿ ದಾಳಿ ನಡೆದಿದೆ. ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಗಿತ್ತು.

ವೀರೇಶ್ ಥೋಮರ್ ಇತ್ತೀಚೆಗಷ್ಟೆ ಬಿಜೆಪಿ ಸೇರಿದ್ದು, ದಯಾಶಂಕರ್ ಗುಪ್ತಾಗೆ ಈ ಕುರಿತು ಅತೃಪ್ತಿ ಇತ್ತು.

“ವೀರೇಶ್ ಥೋಮರ್ ಇತ್ತೀಚೆಗೆ ದಯಾಶಂಕರ್ ನೊಂದಿಗೆ ಫೆಸ್ಬುಕ್ ನಲ್ಲಿ ಕಾದಾಡಿದ್ದ. ವೀರೇಶ್ ಥೋಮರ್ ನ ಸೋದರ ಮಾವ ಫಿರೋಝಾಬಾದ್ ನ ರತಿಗರ್ಥಿ ಯಿಂದ ಸ್ಥಳೀಯ ಗ್ರಾಮಪಂಚಾಯತ್ ಚುನಾವಣೆಗೆ ದಯಶಂಕರ್ ವಿರುದ್ಧ ಸ್ಪರ್ಧಿಸಿದ್ದ ಮತ್ತು ಚುನಾವಣೆಯಲ್ಲಿ ಗೆದ್ದಿದ್ದ” ಎಂದು ಪೊಲೀಸ್ ಅಧಿಕಾರಿ ಸತೀಶ್ ಗಣೇಶ್ ತಿಳಿಸಿದ್ದಾರೆ.

- Advertisement -