Home ಟಾಪ್ ಸುದ್ದಿಗಳು ಬಿಜೆಪಿ ನಾಯಕ ಸಬ್ಯಸಾಚಿ ದತ್ತಾ ಮರಳಿ ಟಿ.ಎಂ.ಸಿ ಸೇರ್ಪಡೆ

ಬಿಜೆಪಿ ನಾಯಕ ಸಬ್ಯಸಾಚಿ ದತ್ತಾ ಮರಳಿ ಟಿ.ಎಂ.ಸಿ ಸೇರ್ಪಡೆ

ಕೋಲ್ಕತ್ತಾ: ಎರಡು ವರ್ಷಗಳ ಹಿಂದೆ ಟಿ.ಎಂ.ಸಿ ತೊರೆದು ಬಿಜೆಪಿ ಸೇರಿದ್ದ ಪ್ರಸಕ್ತ ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಬಿಧನಗರ ಮುನ್ಸಿಪಾಲ್ ಕಾರ್ಪೋರೇಶನ್ (ಬಿಎಂಸಿ) ಮಾಜಿ ಮೇಯರ್ ಸಬ್ಯಸಾಚಿ ದತ್ತಾ ಮರಳಿ ಟಿ.ಎಂ.ಸಿ ಸೇರ್ಪಡೆಗೊಂಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ಪ್ರದೇಶದಲ್ಲಿ ತಾಲಿಬಾನ್ ಮಾದರಿಯ ಸರ್ಕಾರವನ್ನು ನಡೆಸುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ದತ್ತಾ ಅವರನ್ನು ಟಿ.ಎಂ.ಸಿ ಹಿರಿಯ ನಾಯಕರ ಸಮ್ಮುಖದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ, ಕ್ಯಾಬಿನೆಟ್ ಸಚಿವ ಪಾರ್ಥ ಚಟರ್ಜಿ ಅವರು ಪಕ್ಷಕ್ಕೆ ಬರಮಾಡಿಕೊಂಡರು. ದತ್ತಾ ಅವರ ಮನವಿಗೆ ಮೇರೆಗೆ ಪಕ್ಷಕ್ಕೆ ಸೇರ್ಪಡೆಗೊಳಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ತಪ್ಪು ಗ್ರಹಿಕೆಯಿಂದಾಗಿ ಈ ಹಿಂದೆ ಪಕ್ಷವನ್ನು ತ್ಯಜಿಸಿದ್ದೆ ಎಂದು ಟಿ.ಎಂ.ಸಿ ಸೇರ್ಪಡೆಗೊಂಡ ಹಿನ್ನೆಲೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಸಕ್ತ ಈಗ ಟಿ.ಎಂ.ಸಿ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

Join Whatsapp
Exit mobile version