Home ಟಾಪ್ ಸುದ್ದಿಗಳು ಹೆಲ್ಮೆಟ್ ಧರಿಸಿ ವೇದಿಕೆಗೆ ಬಂದ ಬಿಜೆಪಿ ನಾಯಕ !

ಹೆಲ್ಮೆಟ್ ಧರಿಸಿ ವೇದಿಕೆಗೆ ಬಂದ ಬಿಜೆಪಿ ನಾಯಕ !

ದುರ್ಗ್: ಬಿಜೆಪಿ ಕಾರ್ಯಕ್ರಮಕ್ಕೆ ಕಲ್ಲು ತೂರಾಟ ನಡೆಯಲಿದೆ ಎಂಬ ಆತಂಕದಿಂದ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವರೊಬ್ಬರು ವೇದಿಕೆಗೆ ಹೆಲ್ಮೆಟ್ ಧರಿಸಿ ಬಂದ ಪ್ರಸಂಗ ಛತ್ತೀಸ್’ಗಡದಲ್ಲಿ ನಡೆದಿದೆ.


ಸುಪೇಲಾದಲ್ಲಿ ಮಂಗಳವಾರ ನಡೆದ ಸಾರ್ವಜನಿಕ ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದು ರಾಜಕೀಯವಾಗಿ ವಾಗ್ದಾಳಿಗೆ ಕಾರಣವಾಯಿತು. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಇದನ್ನು ಮಾಡಿದ್ದು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ. ಇದರಿಂದ ಕುಪಿತವಾಗಿರುವ ಬಿಜೆಪಿಯು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದೆ.


ಬಿಜೆಪಿ ಮುಖಂಡ, ಮಾಜಿ ಸಚಿವ ಅಜಯ್ ಚಂದ್ರಾಕರ್ ಕ್ರಿಕೆಟ್ ಹೆಲ್ಮೆಟ್ ಧರಿಸಿ ವೇದಿಕೆಯ ಮೇಲೆ ಕಾಣಿಸಿಕೊಂಡರು. ಬಳಿಕ ಮಾತನಾಡಿದ ಅವರು, ನಮ್ಮ ವಿರೋಧಿಗಳು ಕಾರ್ಯಕ್ರಮದ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದಾರೆ. ಇದಕ್ಕಾಗಿ ಹೆಲ್ಮೆಟ್ ಧರಿಸಿ ಬಂದಿದ್ದೇನೆ. ಕಲ್ಲು ತೂರಿದ್ದು ನನ್ನ ಮೇಲಲ್ಲ, ಛತ್ತೀಸ್’ಗಢದ ಜನರ ಮೇಲೆ ಎಂಬುದು ಅವರಿಗೆ ಗೊತ್ತಿಲ್ಲ ಎಂದು ಕಿಡಿಕಾರಿದರು.

Join Whatsapp
Exit mobile version