ಕನಕಪುರ: ಅಯೋಧ್ಯೆಯಿಂದ ತರಲಾದ ಶ್ರೀರಾಮನ ಪವಿತ್ರ ಮಂತ್ರಾಕ್ಷತೆ ಹಂಚಿಕೆಯನ್ನು ಬಿಜೆಪಿ -ಜೆಡಿಎಸ್ ಪಕ್ಷದವರು ಒಟ್ಟಾಗಿ ಸೇರಿ ಜನವರಿ ಹಂಚಲಾಗುವುದು. 1 ರಿಂದ ಪ್ರಾರಂಭಗೊಳಿಸಿ 15 ಕ್ಕೆ ಹಂಚಿಕೆ ಮುಕ್ತಾಯಗೊಳಿಸಲಾಗುವುದು ಎಂದು ಆಯೋಧ್ಯೆ ಶ್ರೀರಾಮ ತೀರ್ಥ ಟ್ರಸ್ಟ್‌ನ ತಾಲ್ಲೂಕು ಸಂಚಾಲಕ ಕುಮಾರಸ್ವಾಮಿ ಹೇಳಿದ್ದಾರೆ.
ಅಯೋದ್ಯೆ ಶ್ರೀರಾಮ ತೀರ್ಥ ಟ್ರಸ್ಟ್ ನೇತೃತ್ವದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಜಂಟಿಯಾಗಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.
ಆಯೋಧ್ಯೆಯು ಶ್ರೀರಾಮನ ಜನ್ಮಭೂಮಿಯಾಗಿದ್ದು, ಅಲ್ಲಿ ರಾಮಮಂದಿರವನ್ನು ನಿರ್ಮಾಣ ಆಗಿದೆ. ಜನವರಿ 22 ಕ್ಕೆ ಶ್ರೀರಾಮನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ದೇಶದ ಜನರು ರಾಮನ ಮೂರ್ತಿ ಪ್ರತಿಷ್ಠಾಪನೆಗೆ ಮನೆಯಿಂದಲೇ ಮಂತ್ರಾಕ್ಷತೆ ಪ್ರೋಕ್ಷಣೆ ಮಾಡಲು ಮನೆ ಮನೆಗೆ ಹಂಚಿಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಈ ಕೆಲಸ ಮಾಡಲಿದ್ದಾರೆಂದು ಹೇಳಿದರು.