Home ಟಾಪ್ ಸುದ್ದಿಗಳು ಬಿಜೆಪಿ-ಜೆಡಿಎಸ್ ನಿಂದ ದ್ವೇಷ ರಾಜಕಾರಣ: ಕೃಷ್ಣ ಬೈರೇಗೌಡ

ಬಿಜೆಪಿ-ಜೆಡಿಎಸ್ ನಿಂದ ದ್ವೇಷ ರಾಜಕಾರಣ: ಕೃಷ್ಣ ಬೈರೇಗೌಡ

ಚಿಕ್ಕಮಗಳೂರು: ಬಿಜೆಪಿ ಮತ್ತು ಜೆಡಿಎಸ್ ನವರು ಏನಾದರೂ ಮಾಡಿ ನಮ್ಮ ಸರ್ಕಾರ ಬೀಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಕೇವಲ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.


ಸುದ್ದಿಗಾರರ ಜತೆ ಮಾತನಾಡಿದ ಅವರು, ಕೇಂದ್ರದಲ್ಲಿ ಎನ್ ಡಿಎ ಸರ್ಕಾರ ಇದೆ. ಕುಮಾರಸ್ವಾಮಿ ಅವರು ಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಇವರ ಕೊಡುಗೆ ಏನು ಎಂದು ಪ್ರಶ್ನಿಸಿದರು.


ರಾಜ್ಯದ ಜನತೆ ನಿಮಗೆ ಅಧಿಕಾರ ನೀಡಿದ್ದು ದ್ವೇಷ ರಾಜಕಾರಣ ಮಾಡಲೋ ಅಥವಾ ರಾಜ್ಯಕ್ಕೆ ಉಪಕಾರ ಮಾಡುವುದಕ್ಕೋ ಎಂದರು. ಸರ್ಕಾರ ಬೀಳಿಸುವುದು ಎತ್ತುವುದು ಜನ ಮಾಡುತ್ತಾರೆ. ಸರ್ಕಾರ ಬೀಳಿಸುವುದೇ ನಿಮ್ಮ ಸಾಧನೆಯೇ, ನಿಮ್ಮ ಸಾಧನೆ ಕೊಡುಗೆ ಬಗ್ಗೆ ಹೇಳಿ ಎಂದರು.

Join Whatsapp
Exit mobile version