Home ಟಾಪ್ ಸುದ್ದಿಗಳು ದ್ವೇಷ ಹರಡಲು ಸ್ವಯಂಚಾಲಿತ ರಹಸ್ಯ ಆ್ಯಪ್ ರಚಿಸಿದ ಬಿಜೆಪಿ ಐಟಿ ಸೆಲ್‌!

ದ್ವೇಷ ಹರಡಲು ಸ್ವಯಂಚಾಲಿತ ರಹಸ್ಯ ಆ್ಯಪ್ ರಚಿಸಿದ ಬಿಜೆಪಿ ಐಟಿ ಸೆಲ್‌!

ಹೊಸದಿಲ್ಲಿ: ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡಲು ಮತ್ತು ಸ್ವಯಂಚಾಲಿತ ತಂತ್ರಜ್ಞಾನದ ಮೂಲಕ ಪ್ರಚೋದನಕಾರಿ ಹ್ಯಾಶ್‌ಟ್ಯಾಗ್ ಟ್ರೆಂಡ್‌ಗಳನ್ನು ರಚಿಸಲು ಬಿಜೆಪಿ ಐಟಿ ಸೆಲ್ ರಹಸ್ಯ ಅಪ್ಲಿಕೇಶನ್ ಅನ್ನು ರಚಿಸಿದೆ ಎಂದು ವರದಿಯಾಗಿದೆ.

ಈ ಕುರಿತು ಸುದ್ದಿ ಸಂಸ್ಥೆ ‘ದಿ ವೈರ್’ ಮಹತ್ವದ ಮಾಹಿತಿ ಬಿಡುಗಡೆ ಮಾಡಿದ್ದು, ಬಿಜೆಪಿಯ ಐಟಿ ಸೆಲ್ ‘ಟೆಕ್ ಫಾಗ್’ ಎಂಬ ಆ್ಯಪ್ ಅನ್ನು ಸಿದ್ಧಪಡಿಸಿರುವುದಾಗಿ ವರದಿ ಮಾಡಿದೆ. ಸಂಘ ಪರಿವಾರದ ಪರ ಟ್ರೆಂಡ್‌ಗಳನ್ನು ಸೃಷ್ಟಿಸಲು ಮತ್ತು ಸ್ವಯಂಚಾಲಿತ ತಂತ್ರಜ್ಞಾನದ ಮೂಲಕ ಪ್ರಚೋದನಕಾರಿ ಹ್ಯಾಶ್ ಟ್ಯಾಗ್ ಟ್ರೆಂಡ್ ಗಾಗಿ ಈ ಅಪ್ಲಿಕೇಶನ್ ಅನ್ನು ಬಳಸಲಾಗುತ್ತಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.  

  2020ರ ಎಪ್ರಿಲ್‌ನಲ್ಲಿ ಬಿಜೆಪಿ ಐಟಿಸೆಲ್ ಉದ್ಯೋಗಿ ಎಂದು ಹೇಳಿಕೊಂಡ ಆರತಿ ಶರ್ಮಾ ಎಂಬವರು ಬಿಜೆಪಿ ಐಟಿ ಸೆಲ್ ವಿರುದ್ಧ ತಮ್ಮ ಅಸಮಾಧಾನ ಹೊರ ಹಾಕುವ ಸರಣಿ ಟ್ವೀಟ್ ಮಾಡಿದ್ದರು. ಅದರಲ್ಲಿ ಬಿಜೆಪಿ ಐಟಿ ಸೆಲ್ ಅಭಿವೃದ್ಧಿ ಪಡಿಸಿದ ಟೆಕ್ ಫಾಗ್ (Tek Fog) ಎಂಬ ಅಪ್ಲಿಕೇಶನ್ ಕುರಿತು ಅವರು ಉಲ್ಲೇಖಿಸಿದ್ದರು. ಈ ಜಾಡು ಹಿಡಿದು ಹೋದ ‘ದಿ ವೈರ್’ ವರದಿಗಾರರಾದ ಆಯುಷ್ಮಾನ್ ಕೌಲ್ ಮತ್ತು ದೇವೇಶ್ ಕುಮಾರ್ ಹಲವು ಆಘಾತಕಾರಿ ಅಂಶವನ್ನು ಹೊರಗೆಡವಿದ್ದಾರೆ.  

https://twitter.com/AarthiSharma8/status/1254773086202650625?ref_src=twsrc%5Etfw%7Ctwcamp%5Etweetembed%7Ctwterm%5E1254773086202650625%7Ctwgr%5E%7Ctwcon%5Es1_&ref_url=https%3A%2F%2Fwww.doolnews.com%2Fbjp-it-cell-secret-app-to-spread-hate-speech-and-create-hashtag-trends-on-social-media-report-with-critical-disclosure544.html
Join Whatsapp
Exit mobile version