Home ಟಾಪ್ ಸುದ್ದಿಗಳು ಬಿಜೆಪಿ ವಿಷಪೂರಿತ ಹಾವಿಗಿಂತ ಕೆಟ್ಟದ್ದು: ಮಮತಾ ಬ್ಯಾನರ್ಜಿ

ಬಿಜೆಪಿ ವಿಷಪೂರಿತ ಹಾವಿಗಿಂತ ಕೆಟ್ಟದ್ದು: ಮಮತಾ ಬ್ಯಾನರ್ಜಿ

ಬಿಜೆಪಿ ವಿಷಪೂರಿತ ಹಾವಿಗಿಂತ ಕೆಟ್ಟದ್ದು, ಹಾವನ್ನಾದರೂ ನಂಬಬಹುದು ಆದರೆ ಬಿಜೆಪಿಯ ನಂಬಲಾಗದು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಗುರುವಾರ ಪಶ್ಚಿಮ ಬಂಗಾಳದ ಕೂಚ್​ ಬಿಹಾರದಲ್ಲಿ ನಡೆದ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದರು.

2024 ರ ಲೋಕಸಭೆ ಚುನಾವಣೆಗೆ ಎಲ್ಲಾ ಪಕ್ಷಗಳು ತಮ್ಮ ತಯಾರಿಯಲ್ಲಿ ನಿರತವಾಗಿವೆ. ಬಿಜೆಪಿ ಚುನಾವಣಾ ನೀತಿ ಸಂಹಿತೆ ಪಾಲಿಸುತ್ತಿಲ್ಲ. ಶಿತಾಲ್ಕುಚಿಯಲ್ಲಿ ಗುಂಡಿಕ್ಕಿ ಕೊಂದವರು ಈಗ ಬಿರ್ಭೂಮ್‌ನಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದಾರೆ ಎಂದು ಆರೋಪಿಸಿದರು.

ಕಳೆದ 3 ವರ್ಷಗಳಿಂದ ವಸತಿ ಯೋಜನೆಗೆ ಹಣ ನೀಡುತ್ತಿಲ್ಲ, ರಸ್ತೆ ಹಣ ನೀಡುತ್ತಿಲ್ಲ, ಬಂಗಾಳ ಉಳಿದರೆ ದೇಶ ಉಳಿಯುತ್ತದೆ. ಕೇಂದ್ರ ತನಿಖಾ ಸಂಸ್ಥೆಗಳು, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಬಿಜೆಪಿಯ ಆದೇಶದಂತೆ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದರು.

Join Whatsapp
Exit mobile version