ವೋಟ್ ಬ್ಯಾಂಕ್ ರಾಜಕಾರಣದ ಹೆಸರಲ್ಲಿ ಬಿಜೆಪಿಯು ಜನತೆಯನ್ನು ವಂಚಿಸುತ್ತಿದೆ: ಡಾ.ಸುಮತಿ.ಎಸ್.ಹೆಗ್ಡೆ

ಮಂಗಳೂರು: ವೋಟ್ ಬ್ಯಾಂಕ್ ರಾಜಕಾರಣದ ಹೆಸರಲ್ಲಿ ಬಿಜೆಪಿಯು ಜನತೆಯನ್ನು ವಂಚಿಸುತ್ತಿದೆ ಎಂದು ಜೆಡಿಎಸ್ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷೆ ಡಾ.ಸುಮತಿ.ಎಸ್.ಹೆಗ್ಡೆ ಆರೋಪಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಮತದಾರರ ಪಟ್ಪಿಯಲ್ಲಿ ಮತದಾರರ ಹೆಸರು ಕಣ್ಮರೆಯಾಗಿರುವುದು ಬಹಿರಂಗಗೊಂಡಿತು. ಚಾನೆಲ್’ನಲ್ಲಿ ಚರ್ಚೆಯಾಗುವುದಿಲ್ಲ. ಜನ ಸಾಮಾನ್ಯರ ಮಧ್ಯೆ ಭಾರೀ ಚರ್ಚೆಯಾಗತೊಡಗಿತು. ನಂತರ ಕುಕ್ಕರ್ ಬಾಂಬ್ ಬಂತು. ಅದು ಚಾನೆಲ್’ನವರಿಗೆ ಆಹಾರವಾಯಿತು. ಯಾರದೋ ತಲೆಗೆ ಕಟ್ಟಿದರು. ಮುಸ್ಲಿಮ್ ಸಮುದಾಯವನ್ನು ಮತ್ತೆ ಅಪರಾಧ ಸ್ಥಾನಕ್ಕೆ ನಿಲ್ಲಿಸಲು ಪ್ರಯತ್ನಿಸಿದರು. ಮತದಾರರ ಮುಂದೆ ಬರಲು ಬಿಜೆಪಿಗೆ ಬೇರೆ ಅಜೆಂಡಾ ಇಲ್ಲ.ಬಿಜೆಪಿ ಆಡಳಿತದಲ್ಲಿ ಬಡವನು ಇನ್ನಷ್ಟು ಬಡವನಾಗಿ, ಬಂಡವಾಳಶಾಹಿ ಗಳು ಇನ್ನಷ್ಟು ಬಲಶಾಲಿಯಾಗುವನು ಎಂದು ತಿಳಿಸಿದ್ದಾರೆ.

- Advertisement -

6 ಕೋಟಿ ಕನ್ನಡಿಗರಿಗೆ ಅನ್ಯಾಯವಾಗುವುದನ್ನು ಜಾತ್ಯತೀತ ಜನತಾದಳದ ಪಕ್ಷವು ಸಹಿಸಲಾರದು. ಈ ಮಣ್ಣಿನಲ್ಲಿ ನ್ಯಾಯ,ಶಾಂತಿ, ಸಹಬಾಳ್ವೆ ಗಟ್ಟಿಗೊಳ್ಳಬೇಕು. ಅಭಿವ್ರದ್ಧಿಯನ್ನು ತೋರಿಸಿ ಮತ ಕೇಳುವ ತಾಕತ್ತು ತೋರಿಸಬೇಕೇ ಹೊರತು ಬಿಜೆಪಿ ಈ ರೀತಿಯ ನಾಟಕವನ್ನು ನಿಲ್ಲಿಸಲಿ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.