Home ಟಾಪ್ ಸುದ್ದಿಗಳು ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡಿಸಿದ ಬಿಜೆಪಿ

ರಾಜ್ಯಸಭೆಯಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕ ಮಂಡಿಸಿದ ಬಿಜೆಪಿ

ನವದೆಹಲಿ: ರಾಜ್ಯಸಭೆಯಲ್ಲಿ ಶುಕ್ರವಾರ ಬಿಜೆಪಿಯ ಇಬ್ಬರು ಸದಸ್ಯರು ವಿವಾದಾತ್ಮಕ ಏಕರೂಪ ನಾಗರಿಕ ಸಂಹಿತೆಗೆ ಸಂಬಂಧಿಸಿದ ವಿಧೇಯಕಗಳನ್ನು ಮಂಡಿಸಿದ್ದಾರೆ. ಕಿರೋಡಿಲಾಲ್ ಮೀನಾ ಅವರು ‘ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ವಿಧೇಯಕ 2020’ ಅನ್ನು ಮಂಡಿಸಿದರೆ, ಹರನಾಥ್ ಸಿಂಗ್ ಯಾದವ್ ಅವರು ‘ಜನಸಂಖ್ಯಾ ನಿಯಂತ್ರಣ ವಿಧೇಯಕ’ವನ್ನು ಮಂಡಿಸಿದರು.


ಏಕರೂಪ ನಾಗರಿಕ ಸಂಹಿತೆಯ ಬಿಜೆಪಿಯ ಕಾರ್ಯ ಸೂಚಿಗಳಲ್ಲಿ ಒಂದಾಗಿದ್ದು, ಖಾಸಗಿ ವಿಧೇಯಕ ಮಂಡನೆ ಮೂಲಕ ಚರ್ಚೆಗೆ ನಾಂದಿ ಹಾಡುವ ಪ್ರಯತ್ನ ನಡೆಸಿದೆ. ಶುಕ್ರವಾರ ಸಂಸತ್ನ ಉಭಯ ಸದನಗಳಲ್ಲಿ ವಿವಿಧ ವಿಷಯಗಳಿಗೆ ಸಂಬಂಧಿಸಿದ ಒಟ್ಟು 153 8.612 ಖಾಸಗಿ ವಿಧೇಯಕಗಳು ಮಂಡನೆಯಾದವು. ಸಂಸತ್ ಹಾಗೂ ವಿಧಾನ ಮಂಡಲಗಳಲ್ಲಿ ಪ್ರತಿ ಶುಕ್ರವಾರ ಸದಸ್ಯರು ಖಾಸಗಿ ವಿಧೇಯಕ ಮಂಡಿಸಲು ಅವಕಾಶ ನೀಡಲಾಗುತ್ತದೆ.


ಸಂವಿಧಾನ ಪೀಠಿಕೆಯ ಬದಲಾವಣೆಗೆ ಬಿಜೆಪಿ ಸಂಸದರೊಬ್ಬರು ವಿಧೇಯಕ ಮಂಡಿಸಲು ಪ್ರಯತ್ನಿಸಿದರಾದರೂ ವಿರೋಧ ಪಕ್ಷಗಳ ವಿರೋಧದಿಂದಾಗಿ ಅದು ಸಾಧ್ಯವಾಗಲಿಲ್ಲ.

Join Whatsapp
Exit mobile version