Home ಕರಾವಳಿ ಧ್ವಜ ವಿವಾದ ಮೂಲಕ ಬಿಜೆಪಿ ಹಿಡನ್ ಅಜೆಂಡಾ ಪ್ರದರ್ಶನ ಮಾಡಿದೆ: ಬಿಕೆ ಹರಿಪ್ರಸಾದ್ ಕಿಡಿ

ಧ್ವಜ ವಿವಾದ ಮೂಲಕ ಬಿಜೆಪಿ ಹಿಡನ್ ಅಜೆಂಡಾ ಪ್ರದರ್ಶನ ಮಾಡಿದೆ: ಬಿಕೆ ಹರಿಪ್ರಸಾದ್ ಕಿಡಿ

ಮಂಗಳೂರು: ಮಂಡ್ಯದ ಕೆರಗೋಡುನಲ್ಲಿ ಹನುಮಧ್ವಜ ವಿವಾದ ಸಂಬಂಧ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಈ ಪ್ರಕರಣದ ಮೂಲಕ ಬಿಜೆಪಿ ತನ್ನ ಹಿಡನ್ ಅಜೆಂಡಾವನ್ನು ಪ್ರದರ್ಶನ ಮಾಡಿದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ನ ನಾಗ್ಪುರ ಕಛೇರಿಯಲ್ಲಿ 52 ವರ್ಷಗಳ‌ ಕಾಲ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ಮಂಡ್ಯದ ಕೆರಗೋಡುನಲ್ಲಿ ರಾಷ್ಟ್ರಧ್ವಜ ಹಾರಿಸುತ್ತೇವೆ ಎಂದು ಅನುಮತಿ ಪಡೆದು ಭಗವಾಧ್ವಜ ಹಾರಿಸಿ ಕೋಮು ಸೌಹಾರ್ದ ಕೆಡಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಿದರು.

ಸರ್ಕಾರ ಶಾಂತಿ ಕಡೆಸುವ ಪ್ರಯತ್ನಗಳನ್ನು ಮಾಡಲು ಬಿಡಬಾರದು. ಸರ್ವ ಜನಾಂಗದ ಶಾಂತಿಯ ತೋಟ ಎಂದು ಪ್ರಣಾಳಿಕೆಯಲ್ಲಿ ಸರ್ಕಾರ ಹೇಳಿದೆ. ಸರ್ಕಾರ ಈ ಪ್ರಕರಣದಲ್ಲಿ ಭಾಗವಹಿಸಿದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ ಎಂಬ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಹರಿಪ್ರಸಾದ್, ರಾಷ್ಟ್ರ ಧ್ವಜ ಹಾರಿಸಲು ಅವಕಾಶ ಮಾಡಿ ಕೊಟ್ಟಿರೋದು ಅಲ್ಪಸಂಖ್ಯಾತರ ಓಲೈಕೆ ಆಗುತ್ತಾ? ಬಿಜೆಪಿ ಬಹುಸಂಖ್ಯಾತರ ಓಲೈಕೆಗೆ ಭಗವಾಧ್ವಜ ಹಾರಿಸಿದೆ ಮತ್ತು ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದೆ ಎಂದರು.

ಇದೇ ವೇಳೆ ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜಗದೀಶ್ ಶೆಟ್ಟರ್ ಸೌಮ್ಯ ಸ್ವಭಾವದ ವ್ಯಕ್ತಿ. ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳಬೇಕಾಗಿತ್ತು. ಅವರು ಪಕ್ಷ ಬಿಟ್ಟು ಹೋಗಿರೋದು ನಮ್ಮ ದೌರ್ಭಾಗ್ಯ. ಆದ್ರೆ ಅವರಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸುತ್ತೇನೆ ಎಂದರು.

Join Whatsapp
Exit mobile version