ಪಾಲಕ್ಕಾಡ್: ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಸಿಪಿಐಎಂ ಕಾರ್ಯಕರ್ತ ಶಾಜಹಾನ್ ಕೊಲೆಯಲ್ಲಿ ಬಿಜೆಪಿ ಮತ್ತು ಸಿಪಿಐಎಂ ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಿದೆ. ಆದರೆ ಈ ಕೊಲೆಯಲ್ಲಿ ಈ ಎರಡೂ ಪಕ್ಷಕ್ಕೆ ಸಮಾನ ಪಾತ್ರವಿದೆ ಎಂದು ಎಸ್‌ಡಿಪಿಐ ಕೇರಳ ರಾಜ್ಯ ಉಪಾಧ್ಯಕ್ಷ ಅಬ್ದುಲ್ ಹಮೀದ್ ಆರೋಪಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಶಾಜಹಾನ್ ಪಕ್ಷದ ನಿಷ್ಟಾವಂತ ಕಾರ್ಯಕರ್ತ. ತನ್ನ ಉತ್ತಮ ಕೆಲಸಗಳ ಮೂಲಕ ಪಕ್ಷದಲ್ಲಿ ಉನ್ನತ ಸ್ಥಾನವನ್ನೂ ಪಡೆದಿದ್ದ. ಇದೂ ಕೂಡಾ ಶಹಜಾನ್ ಕೊಲೆಗೆ ಒಂದು ಕಾರಣ ಎಂದು ಹೇಳಿದರು.
ಸಿಪಿಐಎಂನಲ್ಲಿ ಎರಡು ಮನಸ್ಥಿತಿಯವರು ಇದ್ದಾರೆ. ಒಂದು ಕಮ್ಯೂನಿಷ್ಟ್ ಸಿದ್ಧಾಂತದವರು ಮತ್ತೊಂದು ಆರೆಸ್ಸೆಸ್ ಸಿದ್ಧಾಂತದವರು. ಈ ಎರಡೂ ಸಿದ್ಧಾಂತದವರಿಗೆ ಶಹಜಾನ್ ಪಕ್ಷದಲ್ಲಿರುವುದು ಬೇಕಾಗಿರಲಿಲ್ಲ. ಸೈದ್ಧಾಂತಿಕವಾಗಿ ನಿಷ್ಠನಾಗಿದ್ದ ಶಹಜಾನ್ ಪಕ್ಷ ಬಿಟ್ಟು ಬಿಜೆಪಿ ಸೇರುತ್ತಿದ್ದವರನ್ನು ಪಕ್ಷದಲ್ಲೆ ಉಳಿಯುವಂತೆ ನೋಡಿಕೊಳ್ಳುತ್ತಿದ್ದ. ಇದು ಕೆಲವರಿಗೆ ಅರಗಿಸಿಕೊಳ್ಳಲಾಗಲಿಲ್ಲ ಎಂದವರು ತಿಳಿಸಿದ್ದಾರೆ