Home ಟಾಪ್ ಸುದ್ದಿಗಳು ಬಿಜೆಪಿ ಜನರ ಸುಲಿಗೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ: ಟೋಲ್ ಶುಲ್ಕ ಏರಿಕೆ ವಿರುದ್ಧ ಜೆಡಿಎಸ್ ಆಕ್ರೋಶ

ಬಿಜೆಪಿ ಜನರ ಸುಲಿಗೆ ಮಾಡುವುದನ್ನೇ ಕಾಯಕ ಮಾಡಿಕೊಂಡಿದೆ: ಟೋಲ್ ಶುಲ್ಕ ಏರಿಕೆ ವಿರುದ್ಧ ಜೆಡಿಎಸ್ ಆಕ್ರೋಶ

ಬೆಂಗಳೂರು: ಮುಂದಿನ ತಿಂಗಳಿಂದ ಟೋಲ್ ಶುಲ್ಕ ಶೇ. 5ರಿಂದ 10ರಷ್ಟು ಹೆಚ್ಚಳಕ್ಕೆ ಚಿಂತನೆ ನಡೆಸಿರುವ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಜಾತ್ಯಾತೀತ ಜನತಾ ದಳ, ಅಧಿಕಾರಕ್ಕೆ ಬಂದಾಗಿನಿಂದ ಜನರ ಸುಲಿಗೆ ಮಾಡುವುದನ್ನೇ ಬಿಜೆಪಿ ಕಾಯಕ ಮಾಡಿಕೊಂಡಿದೆ. ಮುಂಬರುವ ದಿನಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಚುನಾವಣೆ ಇದ್ದೂ ಬಿಜೆಪಿ ತನ್ನ ಭಂಡತನವನ್ನು ಮುಂದುವರೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಜನ ಈಗಾಗಲೇ ಬೆಲೆ ಏರಿಕೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದರೆ ಕೇಂದ್ರ ಸರ್ಕಾರ ಜನತೆಯ ಜೀವ ಮತ್ತಷ್ಟು ಹಿಂಡಲು ಹೊರಟಿದೆ. ಟೋಲ್ ಶುಲ್ಕ ಏರಿಸಲು ಹೊರಟಿರುವುದು ಇದಕ್ಕೊಂದು ಉದಾಹರಣೆ. ಇವು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಪದೇ ಪದೇ ಹೇಳುವ ಡಬಲ್ ಎಂಜಿನ್ ಸರ್ಕಾರದ ಸಾಧನೆ ಎಂದು ಹೇಳಿದೆ.

ಕೋಮು ಆಧಾರದಲ್ಲಿ ಜನರನ್ನು ವಿಭಜಿಸಿ ಮತವನ್ನು ಪಡೆಯಬಹುದು ಎಂದು ಬಿಜೆಪಿ ಈಗಲೂ ಭಾವಿಸಿದೆ. ಜನರ ಹಸಿವು ಹೆಚ್ಚಾದಂತೆ ಬಿಜೆಪಿ ಕುಡಿಸಿದ ಕೋಮು ಅಮಲು ಇಳಿಯಲೇಬೇಕಲ್ಲ? ಮುಂಬರುವ ದಿನಗಳಲ್ಲಿ ಬಿಜೆಪಿಯನ್ನು ಜನರು ತಿರಸ್ಕರಿಸಲಿದ್ದಾರೆ ಎಂದು ಜನತಾ ದಳ ಎಚ್ಚರಿಕೆ ನೀಡಿದೆ.

Join Whatsapp
Exit mobile version