September 17, 2021

ಕರ್ನಾಟಕವನ್ನು ‘ಗೂಂಡಾರಾಜ್’ ಆಗಿ ಪರಿವರ್ತಿಸುತ್ತಿರುವ ಬಿಜೆಪಿ: ಕಾಂಗ್ರೆಸ್ ಟೀಕೆ

ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರ ಉದ್ಯಮಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್, ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮಾನಪ್ಪ ವಜ್ಜಲ್ ರ ಪುತ್ರನಿಂದ ಮಾರಣಾಂತಿಕ ಹಲ್ಲೆ ನಡೆದರೂ ದೂರು ದಾಖಲಿಸಲಿಲ್ಲ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಆಡಳಿತದಲ್ಲಿ ಯುಪಿ ಮಾದರಿ ಅನುಸರಿಸಲಾಗುತ್ತಿದೆಯೇ?. ಕರ್ನಾಟಕವನ್ನು ‘ಗೂಂಡಾರಾಜ್’ ಆಗಿ ಪರಿವರ್ತಿಸಲಾಗುತ್ತಿದೆ ಎಂದು ಟೀಕಿಸಿದೆ.


ಹಿಂದೆ ಗೋವಿಂದ್ ಕಾರಜೋಳ ಅವರ ಪುತ್ರ ಪೊಲೀಸರಿಗೆ ‘ಬಾಯಲ್ಲಿ ಬೂಟು ಇಡುತ್ತೇನೆ’ ಎಂದು ಬೆದರಿಕೆಯೊಡ್ಡಿದ್ದ. ಇಂದು ಮಾನಪ್ಪ ವಜ್ಜಲ್ ಪುತ್ರರು ನಶೆಯಲ್ಲಿ ಅಮಾಯಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಬಿಜೆಪಿ ನಾಯಕರು ತಮ್ಮ ಪುತ್ರರನ್ನು ರೌಡಿಗಳನ್ನಾಗಿ ತಯಾರು ಮಾಡುತ್ತಿರುವಂತಿದೆ ಎಂದು ಲೇವಡಿ ಮಾಡಿದೆ.


ಬಿಜೆಪಿ ನಾಯಕರು, ನಾಯಕರ ಮಕ್ಕಳು ಕಂಡ ಕಂಡಲ್ಲಿ ಕುಡಿದು, ಕಂಡ ಕಂಡವರ ಮೇಲೆ ಹಲ್ಲೆ ನಡೆಸುತ್ತಿದ್ದಾರೆ. ಇದರ ಬದಲು ‘ಬಾರ್ ಸಲಹೆಗಾರ’ ಸಿಟಿ ರವಿ ಮಾರ್ಗದರ್ಶನದಲ್ಲಿ ಬಿಜೆಪಿ ಕಚೇರಿಯಲ್ಲಿಯೇ ಬಾರ್ ತೆರೆದುಕೊಳ್ಳಲಿ. ಅಲ್ಲೇ ಕುಡಿದುಕೊಳ್ಳಲಿ, ಅಲ್ಲೇ ಬಡಿದುಕೊಳ್ಳಲಿ, ಜನರಿಗೆ ತೊಂದರೆ ಕೊಡುವುದನ್ನ ಬಿಡಲಿ ಎಂದು ಹೇಳಿದೆ

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!