ನವದೆಹಲಿ: ಬಿಜೆಪಿಯವರು ನನ್ನ ದೇಹವನ್ನು ಬಂಧಿಸಲು ಸಾಧ್ಯವೇ ಹೊರತು ನನ್ನ ಆಲೋಚನೆಗಳನ್ನಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಅಡಿಯಲ್ಲಿರುವ ಜಾರಿ ನಿರ್ದೇಶನಾಲಯವು(ಇಡಿ) ಇತ್ತೀಚೆಗೆ ದೆಹಲಿ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ತನಿಖೆಗೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು.
ಬಿಲಾಸ್ ಪುರದ ಅಕಲ್ತಾರಾದಲ್ಲಿ ರೋಡ್‌ಶೋ ನಡೆಸುತ್ತಿದ್ದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ”ಎಎಪಿ ನಿಷ್ಠಾವಂತ ಪ್ರಾಮಾಣಿಕತೆ, ದೇಶಭಕ್ತಿ ಮತ್ತು ಮಾನವೀಯತೆಯನ್ನು ಆಧರಿಸಿದೆ” ಎಂದು ಹೇಳಿದರು.