ತ್ರಿಪುರಾ: ಮಾಧ್ಯಮ ಕಚೇರಿಗಳಿಗೆ ಬೆಂಕಿ ಹಚ್ಚಿದ ಬಿಜೆಪಿ ಕಾರ್ಯಕರ್ತರು!

Prasthutha|

ಅಗರ್ತಲಾ: ಮಾಧ್ಯಮ ಸಂಸ್ಥೆಗಳು ಮತ್ತು ಸಿಪಿಐ(ಎಂ) ಕಚೇರಿಗಳ ಮೇಲೆ ಪೊಲೀಸರ ಉಪಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿ ಬೆಂಕಿ ಹಚ್ಚಿದ ಘಟನೆ ತ್ರಿಪುರಾದಲ್ಲಿ ನಡೆದಿದೆ.

- Advertisement -

ಸಿಪಿಐ (ಎಂ) ಪಕ್ಷದ ಕಚೇರಿಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸಿದ ಬಿಜೆಪಿ ಕಾರ್ಯಕರ್ತರು ನಂತರ ಬೆಂಕಿ ಹಚ್ಚಿದ್ದಾರೆ. ಪತ್ರಕರ್ತರ ಹನ್ನೆರಡು ಬೈಕುಗಳು ಸೇರಿದಂತೆ ಆರು ಕಾರುಗಳಿಗೆ ಬೆಂಕಿ ಹಚ್ಚಲಾಗಿದ್ದು, ಬಿಜೆಪಿ ಸಚಿವರು ಮತ್ತು ಡೆಪ್ಯುಟಿ ಸ್ಪೀಕರ್ ದುಷ್ಕರ್ಮಿಗಳಿಗೆ ದಾಳಿ ಮಾಡಲು ಬೆಂಬಲ ನೀಡಿದ್ದಾರೆ ಎಂದು ಸಿಪಿಐ(ಎಂ) ಮುಖಂಡ ಬಿಜನ್ ಧರ್ ಆರೋಪಿಸಿದ್ದಾರೆ.

ಏಕಕಾಲದಲ್ಲಿ ಹತ್ತು ಸ್ಥಳಗಳ ಮೇಲೆ ದಾಳಿ ನಡೆಸಿದ ಬಿಜೆಪಿ ಕಾರ್ಯಕರ್ತರು ಪಕ್ಷದ ರಾಜ್ಯ ಸಮಿತಿ ಕಚೇರಿ,ದಶರಥ್ ದೇಬ್ ಭವನ ಸೇರಿದಂತೆ ಹಲವು ಕಚೇರಿಗಳನ್ನು ಧ್ವಂಸಗೊಳಿಸಿದ್ದಾರೆ. ಅಗರ್ತಲಾದ ಮೂರು ಮಾಧ್ಯಮ ಸಂಸ್ಥೆಗಳ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದು, ಮೂವರು ಪತ್ರಕರ್ತರು ಗಾಯಗೊಂಡಿದ್ದಾರೆ. ಘಟನೆ ನಡೆದು 24 ಗಂಟೆ ಕಳೆದರೂ ಪೊಲೀಸರು ಯಾರನ್ನೂ ಬಂಧಿಸಲಿಲ್ಲ. ಐಜಿ (ಕಾನೂನು ಮತ್ತು ಸುವ್ಯವಸ್ಥೆ) ಅರಿಂದಮ್ ನಾಥ್ ಅವರನ್ನು ಭೇಟಿ ಮಾಡಿ ದೂರು ದಾಖಲಿಸಿದ ಪತ್ರಕರ್ತರ ನಿಯೋಗ ತಕ್ಷಣ ಕ್ರಮಕ್ಕೆ ಆಗ್ರಹಿಸಿದೆ.



Join Whatsapp