ನವದೆಹಲಿ: ದೇಶದಲ್ಲಿ ಬೆಲೆಯೇರಿಕೆಯಿಂದ ನಾವು ತತ್ತರಿಸಿದ್ದು, ಗ್ಯಾಸ್ ಬೆಲೆಯನ್ನು ಇಳಿಸುವಂತೆ ಬಿಜೆಪಿ ಮಹಿಳಾ ಕಾರ್ಯಕರ್ತೆ ಕೇಂದ್ರ ಸಚಿವೆ ಸ್ಮೃತಿ ಇರಾನಿಯನ್ನು ಒತ್ತಾಯಿಸಿದ್ದಾರೆ.
ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಾನು ಮೋದಿ ಸರ್ಕಾರದ ಜೊತೆ ಮನವಿ ಮಾಡುವುದೇನೇಂದರೆ “ ನನಗೆ ಮೂರು ಹೆಣ್ಣು ಮಕ್ಕಳಿದ್ದು, ಬೆಲೆಯೇರಿಕೆ ದೇಶದೆಲ್ಲೆಡೆ ಹೆಚ್ಚಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಗ್ಯಾಸ್’ನ ಬೆಲೆ ಜಾಸ್ತಿಯಾಗಿದೆ. ಇದರಿಂದ ನಾವು ಕಂಗೆಟ್ಟಿದ್ದೇವೆ. ನನಗೆ 3 ಹೆಣ್ಣುಮಕ್ಕಳಿರುವುದರಿಂದ ನಾನು ಕೆಲಸಕ್ಕೆ ಹೋಗುತ್ತೇನೆ. ಯಾಕೆಂದರೆ ನನಗೆ ಕುಟುಂಬದ ಜವಾಬ್ದಾರಿ ಇದೆ ಮತ್ತು ಸಂಕಷ್ಟದಲ್ಲಿದ್ದೇನೆ. ಈ ನಿಟ್ಟಿನಲ್ಲಿ ಗ್ಯಾಸ್ ಬೆಲೆಯನ್ನು ಇಳಿಸುವುದರಿಂದ ನಮಗೆ ತುಂಬಾ ಉಪಕಾರಿಯಾಗಲಿದೆ” ಎಂದು ಮನವಿ ಮಾಡುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.
ಮಹಿಳಾ ಕಾರ್ಯಕರ್ತೆಯ ಈ ಮನವಿಗೆ ನೆರೆದ ಇತರ ಕಾರ್ಯಕರ್ತೆಯರು ಚಪ್ಪಾಳೆ ತಟ್ಟುವ ಮೂಲಕ ಅವರನ್ನು ಬೆಂಬಲಿಸಿದ್ದಾರೆ.
ಬೆಲೆಯೇರಿಕೆಯ ವಿರುದ್ಧ ಸ್ವ- ಪಕ್ಷದವರೇ ಬಿಜೆಪಿ ವಿರುದ್ಧ ತಿರುಗಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.