ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಜನ್ಮ ದಿನ ಪ್ರಯುಕ್ತ ವಿಧಾನ ಸೌಧದ ಬಳಿ ಹಾಕಲಾಗಿದ್ದ ಬ್ಯಾನರ್ ಅನ್ನು ಕಾಂಗ್ರೆಸ್ ಕಾರ್ಯಕರ್ತೆ ಬಿಂದು ಗೌಡ ಹರಿದು ಹಾಕಿದ್ದಾರೆ.
ಈ ಕುರಿತು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.
ವಿಧಾನ ಸೌಧದ ಬಳಿ ಮಂಡ್ಯದ ಬಿಜೆಪಿ ನಾಯಕ ಕಿಶನ್ ಗೌಡ ಅವರು ಸಿಟಿ ರವಿ ಜನ್ಮ ದಿನ ಪ್ರಯುಕ್ತ ಬ್ಯಾನರ್ ಅಳವಡಿಸಿದ್ದರು. ಸಾರ್ವಜನಿಕ ಸ್ಥಳದಲ್ಲಿ ಬ್ಯಾನರ್ ಅಳವಡಿಸುವುದು ಕಾನೂನು ವಿರುದ್ಧವಾಗಿದ್ದು, ಇದನ್ನು ಪ್ರಶ್ನಿಸಿ ಬಿಂದು ಗೌಡ ಅವರು ಬ್ಲೇಡ್ ನಲ್ಲಿ ಹರಿದು ಬಿಸಾಕಿದ್ದಾರೆ.