Home ಕರಾವಳಿ 2023ರ ಚುನಾವಣೆಯಲ್ಲಿ ಬಿಲ್ಲವ, ಈಡಿಗ ವೋಟ್ ಬೇಡವೆಂದು ಹೇಳಲಿ, ನಮ್ಮ ತಾಕತ್ತು ತೋರಿಸುತ್ತೇವೆ: ಪ್ರಣಾವಾನಂದ ಸ್ವಾಮೀಜಿ

2023ರ ಚುನಾವಣೆಯಲ್ಲಿ ಬಿಲ್ಲವ, ಈಡಿಗ ವೋಟ್ ಬೇಡವೆಂದು ಹೇಳಲಿ, ನಮ್ಮ ತಾಕತ್ತು ತೋರಿಸುತ್ತೇವೆ: ಪ್ರಣಾವಾನಂದ ಸ್ವಾಮೀಜಿ

ಉಡುಪಿ: 2023ರ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳು ನಮಗೆ ಬಿಲ್ಲವ, ಈಡಿಗ ಸಮುದಾಯವರ ವೋಟ್ ಅಗತ್ಯವಿಲ್ಲ ಎಂದು ಹೇಳಲಿ. ಆ ನಂತರ ಈ ಸಮುದಾಯಗಳ ತಾಕತ್ತು ಏನು ಎಂಬುದನ್ನು ತೋರಿಸುತ್ತೇವೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ಪೀಠದ ಪೀಠಾಧಿಪತಿ ಪ್ರಣಾವಾನಂದ ಸ್ವಾಮೀಜಿ ಸವಾಲೆಸೆದಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಲ್ಲವ ಸಮಾಜವನ್ನು ರಾಜಕೀಯ ಲಾಭಕ್ಕಾಗಿ ವಿನಿಯೋಗಿಸಿಕೊಂಡು ಕೊನೆಗೆ ಕೈಬಿಡಲಾಗಿದೆ. ಈ ಸಮುದಾಯಗಳಿಗೆ ಮೀಸಲಾತಿ ಲಭಿಸುತ್ತಿಲ್ಲ. ಅವರಿಂದ ಹೋರಾಟದ ಮನೋಭಾವವನ್ನು ಇಲ್ಲದಾಗಿಸುವ ಪಿತೂರಿ ನಡೆಯುತ್ತಿದ್ದು, ಆ ಸಮುದಾಯವ ವೋಟ್ ಪಡೆದವರೇ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರಣಾವಾನಂದ ಸ್ವಾಮೀಜಿ ಕಿಡಿಕಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಲ್ಲವ ಮುಖಂಡರಾದ ಬಿಲ್ಲವ ಒಕ್ಕೂಟ ತೋನ್ಸೆ ಅಧ್ಯಕ್ಷ ಬಿ.ಪಿ. ರಮೇಶ್ ಪೂಜಾರಿ, ಪ್ರ. ಕಾರ್ಯದರ್ಶಿ ಸರ್ವೋತ್ತಮ್ ಪೂಜಾರಿ, ಸಂಜಯ್ ಪೂಜಾರಿ, ಆಕಾಶ್ ಕಾರ್ಕಳ ಉಪಸ್ಥಿತರಿದ್ದರು.

Join Whatsapp
Exit mobile version