Home ಟಾಪ್ ಸುದ್ದಿಗಳು ನಡು ರಸ್ತೆಯಲ್ಲಿ ಬೈಕ್ ವೀಲಿಂಗ್; ಬೈಕ್ ಸಮೇತ ಯುವಕ ಪೊಲೀಸ್ ವಶಕ್ಕೆ

ನಡು ರಸ್ತೆಯಲ್ಲಿ ಬೈಕ್ ವೀಲಿಂಗ್; ಬೈಕ್ ಸಮೇತ ಯುವಕ ಪೊಲೀಸ್ ವಶಕ್ಕೆ

ಚಿಕ್ಕಮಗಳೂರು: ನಡು ರಸ್ತೆಯಲ್ಲಿ ವೀಲಿಂಗ್ ನಡೆಸುತ್ತಿದ್ದ ಯುವಕನನ್ನು  ಪೊಲೀಸರು ಬೈಕ್ ಸಮೇತ ವಶಕ್ಕೆ ಪಡೆದಿದ್ದಾರೆ.

ನಗರದ ಎಐಟಿ ವೃತ್ತದ ಬಳಿ ಅಪಾಯಕಾರಿ ರೀತಿಯಲ್ಲಿ ವೀಲಿಂಗ್ ನಡೆಸುತ್ತಿದ್ದಯುವಕನನ್ನು ತಡೆದು ಚಿಕ್ಕಮಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಪೊಲೀಸರು,  ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ರೀತಿಯಾದ ಚಟುವಟಿಕೆಗಳು ವೀಲಿಂಗ್ ನಡೆಸುವ ವ್ಯಕ್ತಿ ಸೇರಿದಂತೆ, ಇತರ ವಾಹನ ಸವಾರರಿಗೂ ಅಪಾಯ, ತೊಂದರೆ ಮಾಡುವ ರೀತಿಯದ್ದಾಗಿದ್ದು, ಈ ರೀತಿಯ ಅಪಾಯಕಾರಿ ಕೃತ್ಯಗಳಲ್ಲಿ ಯಾರೂ ಭಾಗಿಯಾಗದಂತೆ ಎಚ್ಚರಿಸಿದ್ದಾರೆ.

ಇಂತಹ ಚಟುವಟಿಕೆಗಳ ಮೇಲೆ ನಿಗಾವಹಿಸಿರುವ ಪೊಲೀಸರು ಸಾರ್ವಜನಿಕರಿಗೆ ತೊಂದರೆಯಾಗುವಂತೆ ಅಪಾಯಕಾರಿ ಚಾಲನೆಯಲ್ಲಿ ಯಾರಾದರೂ ತೊಡಗಿರುವುದು ಕಂಡುಬಂದಲ್ಲಿ ಹತ್ತಿರದ ಠಾಣೆಗಳ ಪೊಲೀಸರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

Join Whatsapp
Exit mobile version