ಸಿನಿಮೀಯ ರೀತಿಯಲ್ಲಿ ನಡೆದ ರಸ್ತೆ ಅಪಘಾತ । ಬೈಕ್ ಸವಾರ ಮೃತ್ಯು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

Prasthutha|

ಮಂಗಳೂರು : ಪದವಿನಂಗಡಿ ಸಮೀಪ ಬೈಕ್ ನಲ್ಲಿ ಬರುತ್ತಿದ್ದ ಸವಾರನೊಬ್ಬ ಆಕ್ಟೀವಾ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಿರಾಣಿ ಅಂಗಡಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಸಾವನ್ನಪ್ಪಿರುವ ಘಟನೆ ಶುಕ್ರವಾರ ಪದವಿನಂಗಡಿಯಲ್ಲಿ ನಡೆದಿದೆ.

ಬೈಕ್ ಅಪಘಾತದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಿನಿಮೀಯ ಮಾದರಿಯಲ್ಲಿ ಬೈಕ್ ಸವಾರ ಹಾರಿ ಬಿದ್ದಿದ್ದಾನೆ. ಸಾವನ್ನಪ್ಪಿರುವ ಯುವಕನ್ನು ಪ್ರಶಾಂತ್(30) ಎಂದು ಗುರುತಿಸಲಾಗಿದೆ. ಪ್ರಶಾಂತ್ ಬೊಂದೆಲ್‌ ನ ಕೃಷ್ಣನಗರದ ನಿವಾಸಿ ಎಂದು ಹೇಳಲಾಗುತ್ತಿದೆ.

- Advertisement -

ಘಟನೆ ನಡೆದ ತಕ್ಷಣ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.

- Advertisement -