ಬಿಹಾರ: ಬಿಹಾರದ ನಿತೀಶ್ ಕುಮಾರ್ ಸರಕಾರವು ಮೂರು ವರುಷಗಳಿಂದ ದಲಿತ ವಿದ್ಯಾರ್ಥಿ ವೇತನ ವಿತರಿಸಿಲ್ಲ. ನ್ಯಾಶನಲ್ ಸ್ಕಾಲರ್ ಶಿಪ್ ಪೋರ್ಟಿಲಿನ ತಾಂತ್ರಿಕ ತೊಂದರೆ ದಲಿತ ಸ್ಕಾಲರ್ ಶಿಪ್ ವಿತರಿಸುವುದು ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ಸಾಕುಪೋಕು ಕಾರಣ ನೀಡಿದ್ದಾರೆ.
ಬಿಹಾರದಲ್ಲಿ 16% ಎಸ್ ಟಿಗಳು ಮತ್ತು 1% ಎಸ್ ಟಿಗಳು ಇದ್ದು, 5 ಲಕ್ಷ ವಿದ್ಯಾರ್ಥಿಗಳು ಸ್ಕಾಲರ್ ಶಿಪ್ ಪಡೆಯುವ ಅರ್ಹತೆಯವರು ಇದ್ದಾರೆ. ಬಿಹಾರದ ಬಹಳ ವಿದ್ಯಾರ್ಥಿಗಳಿಗೆ ಆರು ವರುಷಗಳಿಂದ ಸ್ಕಾಲರ್ ಶಿಪ್ ಒರೆತಿಲ್ಲ. 2016- 17ರಿಂದ 2018- 19ರವರೆಗಿನ ಹಳೆಯದು ಮತ್ತು ಈಗಿನದು ಸೇರಿದರೆ ಬಹಳಷ್ಟು ಅರ್ಹ ದಲಿತರು ಆರು ವರುಷಗಳಿಂದ ಸ್ಕಾಲರ್ ಶಿಪ್ ವಂಚಿತರಾಗಿದ್ದಾರೆ.
2016ರಲ್ಲಿ ಎಸ್ ಸಿ/ ಎಸ್ ಟಿ ಇಲಾಖೆಯು ರಾಜ್ಯದ ಕಾಸಗಿ ಕಾಲೇಜುಗಳಲ್ಲಿ ರೂ. 2,000ದಿಂದ ರೂ. 90,000ದವರೆಗೆ ಶುಲ್ಕದಲ್ಲಿ ವ್ಯತ್ಯಾಸ ರುವುದರಿಂದ ಸರಿಯಾದ ದಾಮಾಶಯದವರೆಗೆ ಅದನ್ನು ಸರಕಾರವು ನಿರ್ಧರಿಸುವವರೆಗೆ ದಲಿತ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ನೀಡುವುದು ಕಷ್ಟ ಎಂದಿತು. ವರುಷ ಆರಾದರೂ ಅದಕ್ಕೊಂದು ಸೂಕ್ತ ಪರಿಹಾರವನ್ನು ಅಧಿಕಾರಿಗಳೂ ನೀಡಿಲ್ಲ, ಮತ್ತು ನಿತೀಶ್ ಸರಕಾರವೂ ಮಾಡಿಲ್ಲ. ಕಾಲೇಜು ಶುಲ್ಕ ನಮ್ಮ ಮನೆಯವರನ್ನು ಕೊಲ್ಲುತ್ತಿದೆ ಎಂದು ವಿದ್ಯಾರ್ಥಿಗಳು ದೂರುತ್ತಲೇ ಇದ್ದಾರೆ. ಕೇಳಿಸಿಕೊಳ್ಳುವವರು ಮಾತ್ರ ಯಾರೂ ಇಲ್ಲ. ದೇಶದೆಲ್ಲೆಡೆ ಹೆತ್ತವರ ಆದಾಯ ರೂ. 2.5 ಲಕ್ಷ ಮೀರದ ಕುಟುಂಬದ 60 ಲಕ್ಷ ದಲಿತ ವಿದ್ಯಾರ್ಥಿಗಳು ದೇಶಾದ್ಯಂತ ಈ ಸ್ಕಾಲರ್ ಶಿಪ್ ಪಡೆಯುತ್ತಾರೆ. ಬಿಹಾರದಲ್ಲಿ ಅರ್ಹ 5 ಲಕ್ಷ ವಿದ್ಯಾರ್ಥಿಗಳು ಮಾತ್ರ ಸಮಸ್ಯೆ ಎದುರಿಸುತ್ತಿದ್ದಾರೆ.