Home ಟಾಪ್ ಸುದ್ದಿಗಳು ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಾತಿ ಗಣತಿಗೆ ಒತ್ತಾಯ: ಗೃಹ ಸಚಿವಾಲಯ

ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಾತಿ ಗಣತಿಗೆ ಒತ್ತಾಯ: ಗೃಹ ಸಚಿವಾಲಯ

ನವದೆಹಲಿ: ಮುಂಬರುವ ಜನಗಣತಿಯಲ್ಲಿ ಜಾತಿ ವಿವರಗಳನ್ನು ಸಂಗ್ರಹಿಸಲು ಬಿಹಾರ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯಗಳು ವಿನಂತಿಸಿವೆ ಎಂದು ಗೃಹ ಸಚಿವಾಲಯ (MHA) ಲೋಕಸಭೆಗೆ ತಿಳಿಸಿದೆ.

ಅದಾಗ್ಯೂ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ಹೊರತುಪಡಿಸಿ ಇತರ ಜಾತಿ ವಿವರಗಳನ್ನು ಸ್ವಾತಂತ್ರ್ಯದ ಬಳಿಕ ಜನಗಣತಿಯಲ್ಲಿ ಪರಿಗಣಿಸಲಾಗಿಲ್ಲ ಎಂದು MHA ತಿಳಿಸಿದೆ.

ಬಿಹಾರ, ಮಹಾರಾಷ್ಟ್ರ ಮತ್ತು ಒಡಿಶಾ ರಾಜ್ಯ ಸರ್ಕಾರಗಳು ಮುಂಬರುವ ಜನಗಣತಿಯಲ್ಲಿ ಜಾತಿ ವಿವರಗಳನ್ನು ಸಂಗ್ರಹಿಸಲು ಸೂಚಿಸಿವೆ. ಸ್ವಾತಂತ್ರ್ಯದ ಬಳಿಕ ಭಾರತ ಸರ್ಕಾರವು ಜನಗಣತಿಯಲ್ಲಿ ಎಸ್.ಸಿ. ಮತ್ತು ಎಸ್.ಟಿ.ಗಳನ್ನು ಹೊರತುಪಡಿಸಿ ಜಾತಿವಾರು ಜನಸಂಖ್ಯೆಯನ್ನು ಎಣಿಕೆ ಮಾಡಿಲ್ಲ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದರು.

2021 ರ ಜನಗಣತಿಯನ್ನು ನಡೆಸುವ ಸರ್ಕಾರದ ಉದ್ದೇಶವನ್ನು ಮಾರ್ಚ್ 28, 2019 ರಂದು ಭಾರತದ ಗೆಜೆಟ್’ನಲ್ಲಿ ತಿಳಿಸಲಾಗಿದೆ. ಕೋವಿಡ್ 19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಏಕಾಏಕಿ ಜನಗಣತಿ 2021 ಮತ್ತು ಅದರ ಪೂರಕ ಚಟುವಟಿಕೆಗಳನ್ನು ಮುಂದೂಡಲಾಗಿದೆ ಎಂದು ರೈ ತಿಳಿಸಿದರು.

ಮುಂಬರುವ ಜನಗಣತಿಯು ಮೊದಲ ಡಿಜಿಟಲ್ ಮಾದರಿಯ ಜನಗಣತಿಯನ್ನು ಪರಿಚಯಿಸಲಿದೆ ಎಂದು ಅವರು ತಿಳಿಸಿದರು.

ಐದು ತಿಂಗಳ ಹಿಂದೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯ ಸರ್ಕಾರ ಜಾತಿ ಗಣತಿ ನಡೆಸುವುದಾಗಿ ಘೋಷಿಸಿದ್ದರು. ಇದು ಸಮಾಜದ ವಿವಿಧ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ತಿಳಿಸಿದರು.

Join Whatsapp
Exit mobile version