Home ಟಾಪ್ ಸುದ್ದಿಗಳು ಬಿಹಾರದ ಕೂಲಿ ಕಾರ್ಮಿಕನಿಗೆ 14 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್!

ಬಿಹಾರದ ಕೂಲಿ ಕಾರ್ಮಿಕನಿಗೆ 14 ಕೋಟಿ ತೆರಿಗೆ ಪಾವತಿಸುವಂತೆ ನೋಟಿಸ್!

ಬಿಹಾರ: ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿ ವಾಸಿಸುತ್ತಿರುವ ದಿನಗೂಲಿ ಕಾರ್ಮಿಕನಿಗೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ್ದು, ₹14 ಕೋಟಿ ರೂ. ತೆರಿಗೆ ಪಾವತಿಸುವಂತೆ ಸೂಚಿಸಿದೆ.

ನೋಟಿಸ್ ಸ್ವೀಕರಿಸಿದ ನಂತರ, ಯಾದವ್ ಮತ್ತು ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ತಾನು ದಿನಗೂಲಿ ಕಾರ್ಮಿಕನಾಗಿದ್ದು, ತನ್ನ ಸಂಪೂರ್ಣ ಆಸ್ತಿಯನ್ನು ಅನೇಕ ಬಾರಿ ಮಾರಾಟ ಮಾಡಿದ ನಂತರವೂ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಲು ಸಾಧ್ಯವಾಗುವುದಿಲ್ಲ ಎಂದು ಯಾದವ್ ಅಧಿಕಾರಿಗಳಿಗೆ ತಿಳಿಸಿದರು.

ಯಾದವ್ ಈ ಹಿಂದೆ ದೆಹಲಿ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿದ್ದರು, ಆದರೆ 2020 ರಲ್ಲಿ ಕೋವಿಡ್ ಲಾಕ್ಡೌನ್ ನಂತರ ಬಿಹಾರದ ತಮ್ಮ ಮನೆಗೆ ಮರಳಿದರು ಎಂದು ವರದಿಯಾಗಿದೆ. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವಾಗ ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಪ್ರತಿಗಳನ್ನು ತೆಗೆದುಕೊಂಡಿದ್ದರು. ಈ ದಾಖಲೆಯನ್ನು ಕಂಪನಿಗಳು ತೆರಿಗೆಯಿಂದ ನುಣುಚಿಕೊಳ್ಳಲು ದುರ್ಬಳಕೆ ಮಾಡಿರಬಹುದು ಎಂದು ಯಾದವ್‌ ಆರೋಪಿಸಿದ್ದಾರೆ. ತೆರಿಗೆ ನೋಟಿಸ್‌ ನೀಡಲು ಬಂದಿದ್ದ ಅಧಿಕಾರಿಗಳು ಕೂಡ ಯಾದವ್ ಪರಿಸ್ಥಿತಿ ನೋಡಿ ಅಚ್ಚರಿಗೊಂಡ್ಡಿದ್ದರು.

Join Whatsapp
Exit mobile version