Home ಟಾಪ್ ಸುದ್ದಿಗಳು ಬಿಹಾರ | ಆರೆಸ್ಸೆಸ್ ಕಚೇರಿಗಳ ಸಮೀಕ್ಷೆಗೆ ಹಿಂದೂಸ್ತಾನಿ ಅವಾಮ್ ಮೋರ್ಚಾ ಆಗ್ರಹ

ಬಿಹಾರ | ಆರೆಸ್ಸೆಸ್ ಕಚೇರಿಗಳ ಸಮೀಕ್ಷೆಗೆ ಹಿಂದೂಸ್ತಾನಿ ಅವಾಮ್ ಮೋರ್ಚಾ ಆಗ್ರಹ

ಬಿಹಾರ: ಆರೆಸ್ಸೆಸ್ ರಾಜ್ಯದಲ್ಲಿ ಗಲಭೆಗಳನ್ನು ನಡೆಸುವ ದುರುದ್ದೇಶದಿಂದ ಬಾಂಬ್ ಸ್ಫೋಟಗಳು ಮತ್ತು ಇತರ ವಿಧ್ವಂಸಕ ಕೃತ್ಯಗಳನ್ನು ನಡೆಸಬಹುದು ಎಂದು ಹಿಂದೂಸ್ತಾನಿ ಅವಾಮ್ ಮೋರ್ಚಾ (HAM) ಹೇಳಿದೆ. ಈ ನಿಟ್ಟಿನಲ್ಲಿ ಬಿಹಾರದಲ್ಲಿರುವ ಎಲ್ಲಾ ಆರೆಸ್ಸೆಸ್ ಕಚೇರಿಗಳನ್ನು ಸಮೀಕ್ಷೆ ನಡೆಸುವಂತೆ ಅದು ಸರ್ಕಾರವನ್ನು ಒತ್ತಾಯಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ HAM ಸಂಘಟನೆಯ ವಕ್ತಾರ ಡ್ಯಾನಿಶ್ ರಿಝ್ವಾನ್, ಆರೆಸ್ಸೆಸ್ ಬಿಹಾರ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಆರೆಸ್ಸೆಸ್’ನ ಎಲ್ಲಾ ಕಚೇರಿಗಳ ಸಮೀಕ್ಷೆ ಮತ್ತು ತನಿಖೆಗೆ ಆದೇಶಿಸುವಂತೆ ನಾವು ನಿತೀಶ್ ಕುಮಾರ್ ಅವರನ್ನು ಒತ್ತಾಯಿಸುತ್ತೇವೆ. ರಾಜ್ಯದಲ್ಲಿ ಉಂಟಾಗಿರುದ ರಾಜಕೀಯ ಬದಲಾವಣೆಯ ಹಿನ್ನೆಲೆಯಲ್ಲಿ ಆರೆಸ್ಸೆಸ್ ಹಲವು ಸ್ಫೋಟಗಳನ್ನು ನಡೆಸಬಹುದು ಮತ್ತು ಸರ್ಕಾರವನ್ನು ಅಸ್ಥಿರಗೊಳಿಸಲು ಬಿಹಾರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ವೃದ್ಧಿಸಬಹುದು ಎಂದು ಡ್ಯಾನಿಶ್ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ಮತ್ತು ವಿವಾದಾತ್ಮಕ ಹೇಳಿಕೆಗೆ ಕುಖ್ಯಾತಿ ಪಡೆದಿರುವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರು ರಾಜ್ಯದ ಮದರಸಾಗಳನ್ನು ಸಮೀಕ್ಷೆ ನಡೆಸುವಂತೆ ಒತ್ತಾಯಿಸಿದ ಬೆನ್ನಲ್ಲೇ ಡ್ಯಾನಿಶ್ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

ಮಾನ್ಯತೆ ಇಲ್ಲದ ಮದರಸಾಗಳನ್ನು ಉತ್ತರ ಪ್ರದೇಶ ಸರ್ಕಾರ ಸಮೀಕ್ಷೆ ನಡೆಸುತ್ತಿರುವಂತೆ ಬಿಹಾರದಲ್ಲಿಯೂ ಮದರಸಾಗಳನ್ನು ಸಮೀಕ್ಷೆ ನಡೆಸುವಂತೆ ಗಿರಿರಾಜ್ ಸಿಂಗ್ ಆಗ್ರಹಿಸಿದ್ದರು.

ಮಹಾರಾಷ್ಟ್ರದ ನಾಂದೇಡ್ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಆರೆಸ್ಸೆಸಿನ ಮಾಜಿ ಕಾರ್ಯಕರ್ತ ಯಶವಂತ್ ಶಿಂಧೆ ‘ಒಂದು ವರ್ಷದ ಹಿಂದೆ ತಾನು ಆರೆಸ್ಸೆಸಿನ ಬಾಂಬ್ ತಯಾರಿಕಾ ಶಿಬಿರದಲ್ಲಿ ಭಾಗವಹಿಸಿದ್ದಾಗಿಯೂ, ಆರೆಸ್ಸೆಸ್ ಬಾಂಬ್ ಸ್ಫೋಟ ನಡೆಸಿವೆ ಎಂದೂ’ ಹೇಳಿದ ಕೆಲವು ದಿನಗಳ ನಂತರ ಡ್ಯಾನಿಶ್ ಹೇಳಿಕೆ ಹೊರಬಿದ್ದಿದೆ.

ಅಫಿಡವಿತ್’ನಲ್ಲಿ ಯಶವಂತ್ ಶಿಂಧೆ ಅವರು ಹಲವಾರು ಆರೆಸ್ಸೆಸ್ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಕಾರ್ಯಕರ್ತರನ್ನು ಹೆಸರಿಸಿದ್ದಾರೆ, ಅವರು ಬಾಂಬ್ ಸ್ಫೋಟದ ಯೋಜನೆ ಮತ್ತು ಕಾರ್ಯಗತಗೊಳಿಸುವಲ್ಲಿ ಹಲವು ಹಂತಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು.

ಆರ್‌ಎಸ್‌ಎಸ್, ವಿಎಚ್‌ಪಿ, ಬಜರಂಗದಳಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿರುವುದಾಗಿ ಶಿಂಧೆ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

Join Whatsapp
Exit mobile version