ಬಿಹಾರ ಮತ ಎಣಿಕೆ | ಆರ್ ಜೆಡಿ ನೇತೃತ್ವದ ಮಹಾಮೈತ್ರಿಗೆ ಭಾರೀ ಮುನ್ನಡೆ | ಬಹುಮತ ಪಡೆಯುತ್ತಾ ಬಿಜೆಪಿ ವಿರೋಧಿ ಕೂಟ?

Prasthutha|

ಪಾಟ್ನಾ : ಅಮೆರಿಕದಲ್ಲಿ ಬಲಪಂಥೀಯರಿಗೆ ದೊಡ್ಡ ಸೋಲು ಕಂಡ ಚುನಾವಣಾ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ, ಭಾರತದಲ್ಲಿ ನಡೆದಿರುವ ಬಿಹಾರ ವಿಧಾನಸಭಾ ಚುನಾವಣೆಯೂ ಭಾರೀ ಕುತೂಹಲವನ್ನು ಮೂಡಿಸಿದೆ. ಇದೀಗ ಮತ ಎಣಿಕೆ ಕಾರ್ಯ ಭರದಿಂದ ಸಾಗುತ್ತಿದ್ದು, ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ (ಮಹಾಮೈತ್ರಿ) ಭಾರೀ ಮುನ್ನಡೆ ಸಾಧಿಸಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಮಹಾಮೈತ್ರಿ 121 ಸ್ಥಾನಗಳಲ್ಲಿ ಮತ್ತು ಬಿಜೆಪಿ ನೇತೃತ್ವದ ಎನ್ ಡಿಎ 103 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ.

ಸದ್ಯಕ್ಕೆ 238 ಕ್ಷೇತ್ರಗಳ ಮುನ್ನಡೆ ವಿವರ ಲಭ್ಯವಾಗಿದೆ. ಸಮೀಕ್ಷೆಗಳಲ್ಲೂ ಮಹಾಮೈತ್ರಿ ಕೂಟ ಬಹುಮತ ಪಡೆಯಲಿದೆ ಎಂಬ ಸಮೀಕ್ಷೆಗಳು ಹೊರಬಿದ್ದಿದ್ದವು. ಇದೀಗ ಆರಂಭಿಕ ಮುನ್ನಡೆ ಗಮನಿಸಿದರೆ, ಆರ್ ಜೆಡಿ ನೇತೃತ್ವದ ಮೈತ್ರಿಕೂಟ ಮುನ್ನಡೆ ಸಾಧಿಸಲಿದೆ ಎಂಬ ನಿರೀಕ್ಷೆಗಳು ಮೂಡಿವೆ.  

- Advertisement -