ಬಿಹಾರ | ಎನ್ ಡಿಎಗೆ ಮರಳಿ ಗದ್ದುಗೆ | ಕೂದಲೆಳೆಯ ಅಂತರದಲ್ಲಿ ಅಧಿಕಾರ ತಪ್ಪಿಸಿಕೊಂಡ ಮಹಾಘಟಬಂಧನ್

Prasthutha|

ಪಾಟ್ನಾ : ಎಲ್ಲ ಮತದಾನೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿ, ಜಿದ್ದಾಜಿದ್ದಿ ಹೋರಾಟದಲ್ಲಿ ಬಿಹಾರದಲ್ಲಿ ಎನ್ ಡಿಎ ಅಧಿಕಾರ ಮರುಸ್ಥಾಪಿಸಿದೆ. ಇದರೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ನಾಲ್ಕನೇ ಅವಧಿಗೆ ಸ್ಥಾನ ಉಳಿಸಿಕೊಳ್ಳುವುದು ಖಚಿತವಾಗಿದೆ.

ಬುಧವಾರ ಮುಂಜಾನೆ ವೇಳೆಗೆ ಚುನಾವಣಾ ಆಯೋಗ ಎಲ್ಲಾ 243 ಕ್ಷೇತ್ರಗಳ ಫಲಿತಾಂಶ ಘೋಷಿಸಿದೆ. ಜೆಡಿಯು ನೇತೃತ್ವದ ಎನ್ ಡಿಎ 125 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿ, ಸ್ಪಷ್ಟ ಬಹುಮತ ದಾಖಲಿಸಿದೆ. ಆರ್ ಜೆಡಿ ನೇತೃತ್ವದ ಮಹಾಘಟಬಂಧನ್ 110 ಸ್ಥಾನಗಳಿಗಷ್ಟೇ ತೃಪ್ತಿ ಪಡುವಂತಾಗಿದೆ. ಆದರೆ, 75 ಸ್ಥಾನಗಳ ಗೆಲುವಿನ ಮೂಲಕ ಆರ್ ಜೆಡಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

- Advertisement -

ಎನ್ ಡಿಎ ಮೈತ್ರಿಕೂಟದ ಪೈಕಿ ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಎಚ್ ಎಚ್ ಎಎಂ 4 ಕ್ಷೇತ್ರಗಳಲ್ಲಿ ಜಯ ಗಳಿಸಿವೆ. ಮಹಾಘಟಬಂಧನ್ ಪೈಕಿ ಆರ್ ಜೆಡಿ 75, ಕಾಂಗ್ರೆಸ್ 19 ಹಾಗೂ ಎಡಪಕ್ಷಗಳು 16 ಸ್ಥಾನಗಳಲ್ಲಿ ಗೆಲುವುದ ದಾಖಲಿಸಿವೆ.

ಉಳಿದಂತೆ ಎಐಎಂಐಎಂ 5, ಬಿಎಸ್ ಪಿ 1, ಎಲ್ ಜೆಪಿ 1 ಹಾಗೂ ಒಬ್ಬ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

- Advertisement -