Home ಟಾಪ್ ಸುದ್ದಿಗಳು ಬಿಹಾರ ಮೊದಲ ಹಂತದ ಚುನಾವಣೆ: ಸಂಜೆ ಐದು ಗಂಟೆಯ ತನಕ 50 ಶೇಕಡಕ್ಕೂ ಅಧಿಕ ಮತಚಲಾವಣೆ

ಬಿಹಾರ ಮೊದಲ ಹಂತದ ಚುನಾವಣೆ: ಸಂಜೆ ಐದು ಗಂಟೆಯ ತನಕ 50 ಶೇಕಡಕ್ಕೂ ಅಧಿಕ ಮತಚಲಾವಣೆ

ಹೊಸದಿಲ್ಲಿ: ಬಿಹಾರದ ಮೂರು ಹಂತದ ಚುನಾವಣೆಗಳ ಪೈಕಿ ಇಂದು ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕೊರೋನಾ ಸಾಂಕ್ರಮಿಕದ ಮಧ್ಯೆ 50 ಶೇಕಡಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದಾರೆ.

243 ಸೀಟುಗಳ ವಿಧಾನಸಭೆಗೆ 71 ಅಭ್ಯರ್ಥಿಗಳನ್ನು ಆರಿಸುವ ಇಂದಿನ ಚುನಾವಣೆಯಲ್ಲಿ ಸಂಜೆ 5 ಗಂಟೆಯ ತನಕ ಶೇ. 52.24 ಶೇಕಡಾ ಮತ ಚಲಾವಣೆಯಾಗಿದೆ. ಚುನಾವಣೆಯಲ್ಲಿ ಆರ್.ಜೆ.ದಿಯ ತೇಜಸ್ವಿ ಯಾದವ್ ಪ್ರಮುಖ ಎದುರಾಳಿಯಾಗಿದ್ದಾರೆ. ಲಾಕ್ಡೌನ್ ಮತ್ತು ವ್ಯಾಪಕ ನಿರುದ್ಯೋಗದ ಹಿನ್ನೆಲೆಯಲ್ಲಿ ಅವರ 10 ಲಕ್ಷ ಉದ್ಯೋಗ ಭರವಸೆಯು ಮತದಾರರ ಗಮನ ಸೆಳೆದಿತ್ತು.

ಬಿಜೆಪಿ ಬೆಂಬಲವನ್ನು ಪಡೆಯುತ್ತಿದ್ದಾರೆನ್ನಲಾಗುವ ಲೋಕ ಜನಶಕ್ತಿ ಪಕ್ಷದ ಮುಖ್ಯಸ್ಥ ದಿವಂಗತ ರಾಮ್ ವಿಲಾಸ್ ಪಾಸ್ವಾನ್ ರ ಪುತ್ರ ಚಿರಾಗ್ ಪಾಸ್ವಾನ್ ಈ ಚುನಾವಣೆಯಲ್ಲಿ ನಿತೀಶ್ ಕುಮಾರ್ ವಿರುದ್ಧ ಬಂಡುಕೋರರಾಗಿದ್ದಾರೆ.

ಕೋವಿಡ್ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಮತ ಚಲಾಯಿಸುವುದಕ್ಕೆ ಬೇಕಾದ ಹಲವು ಮಾರ್ಗದರ್ಶಿಗಳನ್ನು ಬಿಡುಗಡೆಗೊಳಿಸಿತ್ತು.

Join Whatsapp
Exit mobile version