ಬಿಹಾರದ ನೂತನ ಶಿಕ್ಷಣ ಸಚಿವ, ಭ್ರಷ್ಟಾಚಾರ ಆರೋಪಿ ಮೆವಲಾಲ್ ಚೌಧರಿ ಮೂರೇ ದಿನದಲ್ಲಿ ರಾಜೀನಾಮೆ

Prasthutha: November 19, 2020

ಪಾಟ್ನಾ : ಬಿಹಾರ ನೂತನ ಸರಕಾರದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮೂರೇ ದಿನದಲ್ಲಿ ಭ್ರಷ್ಟಾಚಾರ ಆರೋಪ ಹೊತ್ತ ಶಿಕ್ಷಣ ಸಚಿವ ಮೆವಾಲಾಲ್ ಚೌದರಿ ರಾಜೀನಾಮೆ ನೀಡಿದ್ದಾರೆ.

ಮೆವಲಾಲಾಲ್ ಚೌದರಿ ಓರ್ವ ಒಂದು ವಿವಿಯ ಮಾಜಿ ಉಪ ಕುಲಪತಿಯಾಗಿದ್ದೂ, ಸರಿಯಾಗಿ ರಾಷ್ಟ್ರಗೀತೆಯನ್ನು ಹಾಡಲೂ ಗೊತ್ತಿಲ್ಲದಿದ್ದುದು ವ್ಯಾಪಕ ಸುದ್ದಿಯಾಗಿತ್ತು. ಅವರು ತಪ್ಪುತಪ್ಪಾಗಿ ರಾಷ್ಟ್ರಗೀತೆ ಹಾಡಿದ ವೀಡಿಯೊವೊಂದು ವೈರಲ್ ಆಗಿತ್ತು.

ಇದರ ಜೊತೆಗೆ ಮೆವಲಾಲ್ ವಿರುದ್ಧ ಭ್ರಷ್ಟಾಚಾರ ಆರೋಪಗಳಿರುವ ಬಗ್ಗೆ ಆರ್ ಜೆಡಿ ಗಂಭೀರ ಪ್ರಶ್ನೆಗಳನ್ನು ಎತ್ತಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಕ್ರಿಮಿನಲ್ ಗಳನ್ನು ಸಚಿವ ಸಂಪುಟದಲ್ಲಿ ಸೇರಿಸಿಕೊಂಡು, ರಾಜ್ಯವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಆರ್ ಜೆಡಿ ಆಪಾದಿಸಿತ್ತು.  

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ