ಪಾಟ್ನಾ: ನಿರೀಕ್ಷೆಯಂತೆ ಬಿಹಾರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ನೇತೃತ್ವದ ಹೊಸ ಮಹಾಮೈತ್ರಿ ಸರ್ಕಾರ ವಿಶ್ವಾಸಮತ ಗೆದ್ದಿದೆ.
ಮತದಾನಕ್ಕೂ ಮೊದಲು ಮುಖ್ಯಮಂತ್ರಿ ನಿತೀಶ್ ಕುಮಾರ್ ಅಧಿವೇಶನದಲ್ಲಿ ಮಾತನಾಡುತ್ತಿದ್ದಾಗಲೇ ಬಿಜೆಪಿ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು. ಬಳಿಕ ಸ್ಪೀಕರ್ ಅವರು ವಿಶ್ವಾಸಮತದಲ್ಲಿ ಸರ್ಕಾರ ಜಯಗಳಿಸಿದೆ ಎಂದು ಪ್ರಕಟಿಸಿದರು.