ಬಿಹಾರ: ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಸಾಮೂಹಿಕ ಅತ್ಯಾಚಾರ

- Advertisement -

ಮುಜಾಫರ್​ಪುರ: ಭೂತ ಬಿಡಿಸುವ ನೆಪದಲ್ಲಿ 4 ತಿಂಗಳ ಗರ್ಭಿಣಿ ಮೇಲೆ ಅತ್ಯಾಚಾರವೆಸಗಿರುವ ಘಟನೆ ಬಿಹಾರದ ಮುಜಾಫರ್​ಪುರದಲ್ಲಿ ನಡೆದಿದೆ.

- Advertisement -

ಆಕೆ ಗರ್ಭಿಣಿಯಾದಾಗಿನಿಂದ ಅನಾರೋಗ್ಯಕ್ಕೆ ತುತ್ತಾಗಿದ್ದಳು, ಆಕೆಯ ಕುಟುಂಬದವರು ಮೂಢನಂಬಿಕೆಯಿಂದ ಮಾಂತ್ರಿಕನ ಬಳಿ ಕರೆದುಕೊಂಡು ಬಂದಿದ್ದರು. ಆ ಮಾಂತ್ರಿಕ ಆಕೆಯ ಮಾವನಿಗೆ ಹೊರಗಡೆ ಕೂರುವಂತೆ ಸೂಚಿಸಿ ಆಕೆಯನ್ನು ಒಳಗೆ ಕರೆದುಕೊಂಡು ಹೋಗಿ ಸಹಚರರೊಂದಿಗೆ ಸಾಮೂಹಿಕ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಆಕೆಯ ಮಾವ ಆಕೆಯನ್ನು ಶಿವೈಪಟ್ಟಿ ಪೊಲೀಸ್ ಠಾಣೆ ಪ್ರದೇಶದ ಮಧೇರಾ ಗ್ರಾಮದಲ್ಲಿರುವ ಮಾಂತ್ರಿಕನ ಬಳಿಗೆ ಭೂತ ಬಿಡಿಸಲು ಕರೆದೊಯ್ದರು. ಮಹಿಳೆ ಭಯದಿಂದ ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ. ಆದರೆ ಮತ್ತೊಮ್ಮೆ ಕೂಡ ಹೀಗೆ ಮಾಡಿದ್ದ,ಮೂರನೇ ಬಾರಿಗೆ ಕರೆದೊಯ್ದಾಗ ಆರೋಪಿ ಇದೇ ಕೆಲಸವನ್ನು ಮತ್ತೆ ಮಾಡಿದಾಗ ಆಕೆ ಸುಮ್ಮನಿರಲಾರದೆ ಕುಟುಂಬದವರ ಬಳಿ ಹೇಳಿಕೊಂಡಿದ್ದಾಳೆ.

- Advertisement -

ಮಹಿಳೆ ಸ್ಥಿತಿ ತೀರಾ ಹದಗೆಟ್ಟಿತ್ತು, ಆಕೆಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಕೂಡಲೇ ಕುಟುಂಬದವರಿಗೆ ಮಾಹಿತಿ ನೀಡಲಾಗಿತ್ತು. ಶಿವಾಯಿಪಟ್ಟಿ ಪೊಲೀಸ್ ಠಾಣೆಗೂ ಮಾಹಿತಿ ನೀಡಲಾಗಿದೆ, ಪ್ರಕರಣದಲ್ಲಿ ತನಿಖೆ ಮತ್ತು ಕ್ರಮ ಮುಂದುವರೆದಿದೆ.

- Advertisement -


Must Read

Related Articles