ಬಿಗ್ ಬಾಸ್ ವಿಜೇತ ಮುನಾವರ್ ಫಾರೂಖಿ ಬಂಧನ

Prasthutha|

ಮುಂಬೈ: ಹಿಂದಿ ಬಿಗ್ ಬಾಸ್ ವಿಜೇತ ಮುನಾವರ್ ಫಾರೂಖಿಯನ್ನು ಮುಂಬೈ ಪೊಲೀಸರು ಬಂಧಿಸಿ ಬಳಿಕ ಬಿಡುಗಡೆ ಮಾಡಿದ್ದಾರೆ.

- Advertisement -


ಮುಂಬೈನಲ್ಲಿನ ಹುಕ್ಕಾ ಬಾರ್, ಹುಕ್ಕಾ ಪಾಪ್ಯೂಲರ್ ಮೇಲೆ ತಡರಾತ್ರಿ ದಾಳಿ ನಡೆಸಿದ್ದ ಪೊಲೀಸರು ಬಿಗ್ ಬಾಸ್ ವಿಜೇತ ಮುನಾವರ್ ಫಾರೂಖಿ ಸೇರಿದಂತೆ ಇನ್ನೂ 14 ಮಂದಿಯನ್ನು ಬಂಧಿಸಿದ್ದರು. ಎಲ್ಲರ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಳಿಕ ಎಲ್ಲರನ್ನೂ ಬಿಡುಗಡೆ ಮಾಡಿರುವುದಾಗಿ ಹೇಳಿದ್ದಾರೆ.


ಮಂಗಳವಾರ ರಾತ್ರಿ ಹುಕ್ಕಾ ಪಾಪ್ಯೂಲರ್ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ಸ್ಟಾಂಡಪ್ ಕಮಿಡಿಯನ್ ಮುನಾವರ್ ಫಾರೂಖಿ ಸಹ ಸ್ಥಳದಲ್ಲಿದ್ದರು. ಅವರನ್ನೂ ಸೇರಿದಂತೆ ಅಲ್ಲಿದ್ದ 14 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ದಾಳಿಯ ವೇಳೆ 13,500 ಮೌಲ್ಯದ ಹುಕ್ಕಾ ಪಾಟ್ ಗಳು, 4500 ರೂಪಾಯಿ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.



Join Whatsapp