Home ಟಾಪ್ ಸುದ್ದಿಗಳು ಲೈಂಗಿಕ ಕಿರುಕುಳ ಆರೋಪ: ಮಲಯಾಳಂ ಬಿಗ್ ಬಾಸ್ ನಟ ಶಿಯಾಝ್ ಕರೀಂ ಅರೆಸ್ಟ್

ಲೈಂಗಿಕ ಕಿರುಕುಳ ಆರೋಪ: ಮಲಯಾಳಂ ಬಿಗ್ ಬಾಸ್ ನಟ ಶಿಯಾಝ್ ಕರೀಂ ಅರೆಸ್ಟ್

ಕಾಸರಗೋಡು: ಮದುವೆಯಾಗುವುದಾಗಿ ಭರವಸೆ ನೀಡಿ ಯುವತಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿಂತೆ ಮಲಯಾಳಂ ಬಿಗ್ ಬಾಸ್ ನಟ ಶಿಯಾಝ್ ಕರೀಂನನ್ನು ಪೊಲೀಸರು ಬಂಧಿಸಿದ್ದಾರೆ.


ವಿದೇಶ ದಿಂದ ಬಂದಿಳಿದ ಶಿಯಾಝ್ ನನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.


ಎರ್ನಾಕುಲಂ ನ ಜಿಮ್ ವೊಂದರಲ್ಲಿ ಕೆಲಸಕ್ಕಿದ್ದ ಯುವತಿಗೆ ಮದುವೆಯಾಗುವ ಭರವಸೆ ನೀಡಿರುವ ಶಿಯಾಝ್, 2021 ರಿಂದ 2023 ರ ತನಕ ಮೂರು ವರ್ಷ ಗಳಲ್ಲಿ ಎರ್ನಾಕುಲಂ, ಮುನ್ನಾರ್ ರೆಸಾರ್ಟ್ ಹಾಗೂ ಇನ್ನಿತರ ಕಡೆಗಳಿಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ಸುಮಾರು 11 ಲಕ್ಷ ರೂ.ಪಡೆದು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಶಿಯಾಝ್ ವಿರುದ್ಧ ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಲಾಗಿತ್ತು.

Join Whatsapp
Exit mobile version