Home ಟಾಪ್ ಸುದ್ದಿಗಳು ಬಿಗ್‌ ಬಾಸ್ ಜಗದೀಶ್ ಮೇಲೆ ಮತ್ತೆ ಹಲ್ಲೆ; ಗಲಾಟೆ ವೇಳೆ ಫೈರಿಂಗ್, ಗನ್‌ ಮ್ಯಾನ್‌ ಗಳು...

ಬಿಗ್‌ ಬಾಸ್ ಜಗದೀಶ್ ಮೇಲೆ ಮತ್ತೆ ಹಲ್ಲೆ; ಗಲಾಟೆ ವೇಳೆ ಫೈರಿಂಗ್, ಗನ್‌ ಮ್ಯಾನ್‌ ಗಳು ಪೊಲೀಸ್ ವಶಕ್ಕೆ!

ಬೆಂಗಳೂರು: ಬಿಗ್ ಬಾಸ್ ಸ್ಪರ್ಧಿ, ವಕೀಲ ಜಗದೀಶ್ ಮೇಲೆ ಮತ್ತೆ ಪುಂಡರು ಗಂಭೀರವಾಗಿ ಹಲ್ಲೆ ಮಾಡಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಸಹಕಾರ ನಗರದಲ್ಲಿರುವ ಜಗದೀಶ ನಿವಾಸದ ಬಳಿಯೇ ನಡೆದಿದೆ.

ಘಟನೆಯಲ್ಲಿ ವಕೀಲ್ ಜಗದೀಶ ಮೂಗಿಗೆ ಗಂಭೀರ ಗಾಯವಾಗಿದೆ ಅಲ್ಲದೆ ಜಗದೀಶ್ ಪುತ್ರನ ಮೇಲೂ ಹಲ್ಲೆ ಮಾಡಲಾಗಿದೆ. ಮಗನ ಮುಖ,ಕಿವಿ ಭಾಗದಲ್ಲಿ ಗಾಯಗಳಾಗಿವೆ.

ನಿನ್ನೆಯಷ್ಟೆ ವಕೀಲ ಜಗದೀಶ್ ಮೇಲೆ ಯುವಕನೋರ್ವ ಕುತ್ತಿಗೆ ಹಿಡಿದು ಹಲ್ಲೆ ಮಾಡಿದ್ದ ವಿಡಿಯೋ ವೈರಲ್ ಆಗಿತ್ತು. ಯುವಕ ಕಣ್ಣು ಮುಖ ಮೂತಿ ನೋಡದೇ ಪಂಚ್ ಮಾಡಿದ್ದರಿಂದ ಜಗದೀಶ ಕಣ್ಣು ಊದಿಕೊಂಡಿತ್ತು. ಇದೀಗ ಮತ್ತೆ ಪುಂಡರಿಂದ ಜಗದೀಶ್ ಮೇಲೆ ಹಲ್ಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಅಣ್ಣಮ್ಮ ಕೂರಿಸೋ ವಿಚಾರಕ್ಕೆ ಮತ್ತೆ ಗಲಾಟೆಯಾಗಿರುವ ಶಂಕೆ ವ್ಯಕ್ತವಾಗಿದೆ. ನೂರಾರು ಮಂದಿಯಿಂದ ಹಲ್ಲೆ ನಡೆದಿರುವ ಆರೋಪ ಕೇಳಿಬಂದಿದೆ.

ಗಲಾಟೆ ವೇಳೆ ಗಾಳಿಯಲ್ಲಿ ಗುಂಡು ಹಾರಿಸಿರುವ ಲಾಯರ್ ಜಗದೀಶ್‌ ಗನ್‌ಮ್ಯಾನ್‌ಗಳನ್ನ ಕೊಡಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ.

ಸಿದ್ದರಾಮಯ್ಯ ಅವರೇ ಸಿಎಂ ಆಗಿ ಏನು ಮಾಡುತ್ತಿದ್ದೀರಿ?

ಸಿದ್ದರಾಮಯ್ಯ ಅವರೇ ರಾಜ್ಯದ ಮುಖ್ಯಮಂತ್ರಿಯಾಗಿ ಏನು ಮಾಡುತ್ತಿದ್ದೀರಿ? ಎಂದು ಪ್ರಶ್ನಿಸಿರುವ ಜಗದೀಶ್, ಅನ್ಯಾಯದ ವಿರುದ್ಧ ದನಿ ಎತ್ತುವವರ ಮೇಲೆ ಹಲ್ಲೆ ನಡೆಯುತ್ತಿದೆ. ಲಾಂಗ್ ಮಚ್ಚು ಹಿಡಿದು ಮನೆಯವರೆಗೂ ಬಂದು ಹಲ್ಲೆ ನಡೆಸುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಎಲ್ಲಿ ಸ್ವಾಮಿ ಎಂದು ರಾಜ್ಯ ಸರ್ಕಾರದ ವಿರುದ್ಧ ವಕೀಲ ಜಗದೀಶ್ ಹರಿಹಾಯ್ದಿದ್ದಾರೆ.

Join Whatsapp
Exit mobile version