Home ಜಾಲತಾಣದಿಂದ BMTC ಬಸ್​ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಅಷ್ಟಕ್ಕೂ ನಡೆದದ್ದೇನು?

BMTC ಬಸ್​ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್| ಅಷ್ಟಕ್ಕೂ ನಡೆದದ್ದೇನು?

ಬೆಂಗಳೂರು: BMTC ಬಸ್​ಗೆ ಬೆಂಕಿ ತಗುಲಿ ಕಂಡಕ್ಟರ್ ಸಜೀವ ದಹನ ಪ್ರಕರಣಕ್ಕೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ಬಸ್ ನಿರ್ವಾಹಕ ಮುತ್ತಯ್ಯ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.

ಮಾರ್ಚ್ 9 ರಂದು ಬ್ಯಾಡರಹಳ್ಳಿ ನಿಲ್ದಾಣದಲ್ಲಿ ಸುಮ್ಮನಹಳ್ಳಿ ಡಿಪೋ 31ಕ್ಕೆ ಸೇರಿದ್ದ BMTC ಬಸ್​ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿತ್ತು. ಈ ಘಟನೆಯಲ್ಲಿ ಕಂಡಕ್ಟರ್​ ಮುತ್ತಯ್ಯ ಸಜೀವ ದಹನವಾಗಿದ್ದರು.

ನಂತರ ಪ್ರಕರಣದ ಬಗ್ಗೆ ಸೂಕ್ಷ್ಮವಾಗಿ ತನಿಖೆ ನಡೆಸಿದ ಪೊಲೀಸರಿಗೆ ಹಲವು ವಿಚಾರಗಳು ಲಭಿಸಿದೆ. ಮೃತ ಕಂಡಕ್ಟರ್​ ಮುತ್ತಯ್ಯ ಅವರ ಮೊಬೈಲ್ ಹಾಗೂ ಯುಪಿಐ ಐಡಿ ಪರಿಶೀಲನೆ ನಡೆಸಿದ್ದು, ಅಗ್ನಿ ದುರಂತದ ರಾತ್ರಿ ಮುತ್ತಯ್ಯ ಯುಪಿಐ ಐಡಿಯಿಂದ ಕೊನೆಯದಾಗಿ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಅಗ್ನಿ ದುರಂತ ಸಂಭವಿಸಿದ ಸ್ಥಳದಿಂದ ಸ್ವಲ್ಪ ದೂರ ಇರುವ ಪೆಟ್ರೋಲ್ ಬಂಕ್ ಖಾತೆಗೆ 700 ರೂಪಾಯಿ ಹಣ ವರ್ಗಾವಣೆಯಾಗಿದ್ದು, ಪೆಟ್ರೋಲ್, ಡಿಸೇಲ್ ಖರೀದಿಸಿರುವ ಬಗ್ಗೆ ಮಾಹಿತಿ ತಿಳಿದುಬಂದಿದೆ. ಎರಡು ಲೀಟರ್ ಪೆಟ್ರೋಲ್, ಐದು ಲೀಟರ್ ಡಿಸೇಲ್ ತಂದು ಬೆಂಕಿ ಹಚ್ಚಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎನ್ನುವ ಬಗ್ಗೆ ಕೆಲವು ಪೂರಕ ಅಂಶಗಳು ಪತ್ತೆಯಾಗಿವೆ.

ಬಸ್ ನಿಲ್ಲಿಸಿದ ನಂತರ ಹೊರ ಹೋಗಿ ಬಂದಿದ್ದ ಮುತ್ತಯ್ಯ, ಡ್ರೈವರ್ ಪ್ರಕಾಶ್ ಅವರನ್ನು ಮಲಗುವಂತೆ ಹೇಳಿ ಕಳುಹಿಸಿದ್ದರು. ಬಳಿಕ ಡ್ರೈವರ್ ಮಲಗಿದ ನಂತರ ಮುತ್ತಯ್ಯ ಬಸ್ ನಿಂದ ಹೊರ ಹೋಗಿ ಬಂದಿರುವ ಮಾಹಿತಿ ಸಿಕ್ಕಿದೆ. ಅಲ್ಲದೇ ಬಸ್​ನ ಎಲ್ಲ ಕಿಟಕಿಗಳು ಹಾಗೂ ಡೋರ್ ಒಳಗಿನಿಂದ ಕ್ಲೋಸ್ ಆಗಿದ್ದವು ಎನ್ನುವುದು ಕೂಡ ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಇದಲ್ಲದೆ ಕೆಲವು ತಾಂತ್ರಿಕ ಮತ್ತು ವೈಜ್ಞಾನಿಕ ಎವಿಡೆನ್ಸ್ ಕಲೆ ಹಾಕುತ್ತಿರುವ ಪೊಲೀಸರು, ಮುತ್ತಯ್ಯ ಹಣಕಾಸು ವಿಚಾರದ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಣೆ ನಡೆಸಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ, ಕಾರಣ ಏನು ಎಂಬುದು ತಿಳಿಯಬೇಕಿದೆ.

Join Whatsapp
Exit mobile version