Home ಟಾಪ್ ಸುದ್ದಿಗಳು ನಾಗಾರ್ಜುನಗೆ ಬಿಗ್ ರಿಲೀಫ್: ಕನ್ವೆನ್ಷನ್ ಸೆಂಟರ್ ಕಟ್ಟಡ ತೆರವಿಗೆ ಹೈಕೋರ್ಟ್‌ ತಡೆ

ನಾಗಾರ್ಜುನಗೆ ಬಿಗ್ ರಿಲೀಫ್: ಕನ್ವೆನ್ಷನ್ ಸೆಂಟರ್ ಕಟ್ಟಡ ತೆರವಿಗೆ ಹೈಕೋರ್ಟ್‌ ತಡೆ

ಹೈದರಾಬಾದ್‌: ತೆಲುಗು ನಟ ನಾಗಾರ್ಜುನಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ.

ನಾಗಾರ್ಜುನ ಒಡೆತನದ ಎನ್ ಕನ್ವೆನ್ಷನ್ ಸೆಂಟರ್ ಕೆಡವದಂತೆ ತೆಲಂಗಾಣ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಹೈದರಾಬಾದ್‌ ನ ಮದಾಪುರದಲ್ಲಿರುವ ಎನ್ ಕನ್ವೆನ್ಷನ್ ಸೆಂಟರ್ ಕೆಲ ಭಾಗಗಳನ್ನು ಇಂದು (ಆ.24) ಹೈಡ್ರಾ ಅಧಿಕಾರಿಗಳು ಧ್ವಂಸಗೊಳಿಸಿದ್ದಾರೆ. ವಿವಾದ ಕೋರ್ಟ್‌ನಲ್ಲಿದ್ರೂ ನೋಟಿಸ್ ನೀಡದೇ ತೆರವು ಮಾಡಲಾಗಿದೆ ಎಂದು ನಾಗಾರ್ಜುನ ಮತ್ತೆ ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದು, ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

Join Whatsapp
Exit mobile version