ಮಂಗಳೂರು : ಮಂಗಳೂರಿನ NMPT ಬಂದರಿಗೆ ಇದೇ ಮೊದಲ ಬಾರಿಗೆ ಭಾರೀ ಗಾತ್ರದ ಕಂಟೈನರ್ ನೌಕೆಯೊಂದು ಇಂದು ಆಗಮಿಸಿದೆ. ಎಂ.ವಿ. ಎಸ್‌ಎಸ್‌ಎಲ್ ಬ್ರಹ್ಮಪುತ್ರ- ವಿ.084 ಎಂಬ ಹೆಸರಿನ ಈ ಕಂಟೈನರ್ ನೌಕೆಯಲ್ಲಿರುವ ಒಟ್ಟು ಕಂಟೈನರ್ ಸಂಖ್ಯೆಯಲ್ಲಿ ಹಾಗೂ ನೌಕಾ ಗಾತ್ರದಲ್ಲೂ ಅದು ಬೃಹತ್ತಾಗಿದೆ.
ನವ ಮಂಗಳೂರು ಬಂದರಿನಲ್ಲಿ ಈಗ ಕಂಟೈನರ್ ನಿರ್ವಹಣೆ ಹೆಚ್ಚಾಗುತ್ತಿದೆ. 2000ನೇ ವರ್ಷದಲ್ಲಿ 2 ಸಾವಿರ ಟಿಇಯುಗಳಷ್ಟು ನಿರ್ವಹಣೆ ಮಾಡಿದ್ದರೆ, 2020-21ರ ಸಾಲಿನಲ್ಲಿ ಈ ಪ್ರಮಾಣ 1.5 ಲಕ್ಷ ಟಿಇಯುಗೆ ಹೆಚ್ಚಿದೆ. ಈಗ NMPTಗೆ ಬಂದಿರುವ ನೌಕೆ 260 ಮೀಟರ್ ಉದ್ದ ಹಾಗೂ 32.35 ಮೀಟರ್ ಅಗಲವಿದೆ. 25864.40 ಮೆಟ್ರಿಕ್ ಟನ್ ಕಚ್ಚಾ ಗೋಡಂಬಿಯನ್ನು ಈ ನೌಕೆ ಹೊತ್ತು ತಂದಿದೆ.