Home ಟಾಪ್ ಸುದ್ದಿಗಳು ಮಾಯಾವತಿಗೆ ದೊಡ್ಡ ಹೊಡೆತ: BSP ಹಾಲಿ ಸಂಸದ BJP ಸೇರ್ಪಡೆ

ಮಾಯಾವತಿಗೆ ದೊಡ್ಡ ಹೊಡೆತ: BSP ಹಾಲಿ ಸಂಸದ BJP ಸೇರ್ಪಡೆ

ಕಾನ್ಪುರ: ಉತ್ತರ ಪ್ರದೇಶದ ಬಿಎಸ್‌ಪಿ ಪಕ್ಷಕ್ಕೆ ಹೊಡೆತ ಬಿದ್ದಿದ್ದು, ಅಂಬೇಡ್ಕರ್ ನಗರದ ಬಹುಜನ ಸಮಾಜ ಪಕ್ಷದ ಲೋಕಸಭಾ ಸಂಸದ ರಿತೇಶ್ ಪಾಂಡೆ ಬಿಎಸ್‌ಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.

ಸಂಸತ್ತಿನ ಬಜೆಟ್ ಅಧಿವೇಶನದ ವೇಳೆ ಪ್ರಧಾನಿ ನರೇಂದ್ರ ಮೋದಿ ಜೊತೆ ಸಂಸತ್ ಭವನದ ಕ್ಯಾಂಟೀನ್‌ನಲ್ಲಿ ಊಟ ಮಾಡಿದ 9 ಸಂಸದರಲ್ಲಿ ರಿತೇಶ್ ಪಾಂಡೆ ಕೂಡ ಸೇರಿದ್ದರು.

ಅಂಬೇಡ್ಕರ್ ನಗರದಿಂದ ರಿತೇಶ್ ಪಾಂಡೆಗೆ ಬಿಜೆಪಿ ಟಿಕೆಟ್ ನೀಡಬಹುದು ಎಂದು ಹೇಳಲಾಗುತ್ತಿದ್ದು, ರಾಜಕೀಯ ಕುಟುಂಬದಿಂದ ಬಂದಿರುವ ರಿತೇಶ್ ತಂದೆ ರಾಕೇಶ್ ಪಾಂಡೆ ಸದ್ಯ ಸಮಾಜವಾದಿ ಪಕ್ಷದ ಶಾಸಕರಾಗಿದ್ದಾರೆ.

ಮಾಯಾವತಿ ಅವರಿಗೆ ಕಳುಹಿಸಿದ ರಾಜೀನಾಮೆ ಪತ್ರದಲ್ಲಿ ರಿತೇಶ್ ಪಾಂಡೆ, ನಾನು ಬಿಎಸ್‌ಪಿಗೆ ಸೇರಿದಾಗ, ನನಗೆ ನಿಮ್ಮ ಮಾರ್ಗದರ್ಶನ ಸಿಕ್ಕಿತು ಮತ್ತು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ತುಂಬಾನೇ ಬೆಂಬಲವನ್ನು ನೀಡಿದರು. ಉತ್ತರ ಪ್ರದೇಶ ಅಸೆಂಬ್ಲಿ ಮತ್ತು ಲೋಕಸಭೆಯಲ್ಲಿ ಪ್ರತಿನಿಧಿಸಲು ಮತ್ತು ಸಂಸದೀಯ ಪಕ್ಷದ ನಾಯಕನಾಗಿ ಕೆಲಸ ಮಾಡಲು ಪಕ್ಷವು ನನಗೆ ಅವಕಾಶ ನೀಡಿತು. ಈ ವಿಶ್ವಾಸಕ್ಕಾಗಿ ನಾನು ನಿಮಗೆ, ಪಕ್ಷಕ್ಕೆ, ಪಕ್ಷದ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ನನ್ನ ಹೃದಯದಾಳದಿಂದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version