January 14, 2021

ಕೃಷಿ ಕಾಯ್ದೆಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ಹೊರಬಂದ ಭೂಪೇಂದ್ರ ಸಿಂಗ್ ಮಾನ್

ನವದೆಹಲಿ : ಕೇಂದ್ರ ಸರಕಾರದ ನೂತನ ಕೃಷಿ ಕಾನೂನುಗಳಿಗೆ ತಾತ್ಕಾಲಿಕ ತಡೆ ನೀಡಿರುವ ಸುಪ್ರೀಂ ಕೋರ್ಟ್, ಮಾತುಕತೆಗಾಗಿ ನಿಯೋಜಿಸಿರುವ ಸಮಿತಿಯ ನಾಲ್ವರು ಸದಸ್ಯರ ಪೈಕಿ, ಭೂಪೇಂದ್ರ ಸಿಂಗ್ ಮಾನ್ ಹೊರ ನಡೆದಿದ್ದಾರೆ. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಈ ಬಗ್ಗೆ ಮಾಹಿತಿ ನೀಡಿದೆ.

“ತಮ್ಮನ್ನು ನೇಮಕ ಮಾಡಿರುವುದಕ್ಕೆ ಸುಪ್ರೀಂ ಕೋರ್ಟ್ ಗೆ ಧನ್ಯವಾದ ಹೇಳುತ್ತೇನೆ. ನಾನು ರೈತರ ನಾಯಕನಾಗಿದ್ದುಕೊಂಡು, ಅವರ ಹಿತಾಸಕ್ತಿಗಾಗಿ ಯಾವುದೇ ಹುದ್ದೆಯನ್ನು ತ್ಯಜಿಸುವುದಕ್ಕೂ ಸಿದ್ಧನಿದ್ದೇನೆ. ನಾನು ಎಂದಿಗೂ ರೈತರ ಪರ ಹಾಗೂ ಪಂಜಾಬ್ ಪರವಾಗಿರುತ್ತೇನೆ. ಸಮಿತಿ ಸದಸ್ಯತ್ವದಿಂದ ಹೊರಬರುತ್ತಿದ್ದೇನೆ ಎಂದು ಮಾನ್ ತಿಳಿಸಿದ್ದಾರೆ.

ಕೃಷಿ ತಜ್ಞರಾದ ಅಶೋಕ್ ಗುಲಾಟಿ, ಡಾ. ಪ್ರಮೋದ್ ಕುಮಾರ್ ಜೋಷಿ, ಅನಿಲ್ ಕುಮಾರ್ ಧನ್ವಂತ್ ಸಮಿತಿಯಲ್ಲಿದ್ದಾರೆ. ಮಾನ್ ಮಾಜಿ ಸಂಸದರಾಗಿದ್ದು, ಅಖಿಲ ಭಾರತೀಯ ಕಿಸಾನ್ ಸಮನ್ವಯ ಸಮಿತಿ ಅಧ್ಯಕ್ಷರೂ ಆಗಿದ್ದಾರೆ.  

ಟಾಪ್ ಸುದ್ದಿಗಳು

ವಿಶೇಷ ವರದಿ