Home ಟಾಪ್ ಸುದ್ದಿಗಳು ವಂಚಿಸಿದ ವ್ಯಕ್ತಿಯನ್ನು ಕೊಂದು ಠಾಣೆಗೆ ಶವತಂದು ಶರಣಾದ ಭೂಪ!

ವಂಚಿಸಿದ ವ್ಯಕ್ತಿಯನ್ನು ಕೊಂದು ಠಾಣೆಗೆ ಶವತಂದು ಶರಣಾದ ಭೂಪ!

ಬೆಂಗಳೂರು: ಕೋಟ್ಯಂತರ ರೂ.ವಂಚನೆ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಕೊಲೆಗೈದು ಮೃತದೇಹವನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ತಂದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲಾಗಿದೆ.

ರಾಮಮೂರ್ತಿ ನಗರದ ಜಯಂತಿನಗರದ ನಿವಾಸಿ ಮಹೇಶಪ್ಪ ಎಂಬಾತನನ್ನು ಕೊಂದು ಮೃತದೇಹವನ್ನು ಠಾಣೆಗೆ ತಂದಿದ್ದ ಆರೋಪಿ ರಾಜಶೇಖರ್ ಬಂಧಿತ ಆರೋಪಿ.

ನಂಜನಗೂಡು ಬಳಿಯ ಹಿಮನಗುಂಡಿ ಎಂಬ ಹಳ್ಳಿಯಿಂದ ಮಹೇಶಪ್ಪನನ್ನು ಬೆಂಗಳೂರಿಗೆ ಕರೆತಂದಿದ್ದ ರಾಜಶೇಖರ್ ಜೊತೆ ಮಹೇಶಪ್ಪಗೆ ಒಳ್ಳೆಯ ಸ್ನೇಹ ಇತ್ತು. ಬ್ಯಾಂಕ್’ಗಳಲ್ಲಿ ಸಾಲ ಕೊಡಿಸುವುದಾಗಿ ಹಲವರಿಂದ ಹಣ ಪಡೆದಿದ್ದ ಮಹೇಶಪ್ಪ ಎಲ್ಲಾ ವ್ಯವಹಾರಗಳಲ್ಲೂ ರಾಜಶೇಖರ ಮತ್ತು ಆತನ ತಾಯಿ ಸುವಿಧಾ ಜೊತೆಗಿದ್ದರು. ಆದರೆ ಯಾರಿಗೂ ಸಾಲ ಕೊಡಿಸದೇ ಪಡೆದ ಹಣ ವಾಪಸ್ ನೀಡದೇ ಮಹೇಶಪ್ಪ ಪರಾರಿಯಾಗಿದ್ದನು.

ಇದರಿಂದಾಗಿ ಸಂಕಷ್ಟಕ್ಕೀಡಾದ ರಾಜಶೇಖರ ತನ್ನ ಮನೆಯನ್ನೇ ಮಾರಿ ಹಲವರಿಗೆ ಹಣ ಕೊಟ್ಟು ಬೇಸತ್ತಿದ್ದ. ಇದರಿಂದ ಮಹೇಶಪ್ಪನ್ನನ್ನು ಹುಡುಕಿಕೊಂಡು ಹಳ್ಳಿಗೆ ಹೋಗಿದ್ದ. ಅಲ್ಲಿಂದ ಮಹೇಶಪ್ಪನನ್ನು ಕಾರಿನಲ್ಲಿ ಕರೆತಂದು ಮಾರ್ಗ ಮಧ್ಯೆ ಅವಲಹಳ್ಳಿ ಬಳಿ ಹಣ ವಾಪಸ್ ನೀಡುವಂತೆ  ರಾಡ್ ನಿಂದ ತೀವ್ರವಾಗಿ ಹಲ್ಲೆ ಮಾಡಿದ್ದಾನೆ. ಬೆಳಗ್ಗೆ ತನಕ ಗಾಯಾಳುವನ್ನು ಕಾರಿನಲ್ಲೇ ಇರಿಸಿಕೊಂಡಿದ್ದನು. ಆರೋಪಿ ಬೆಳಗ್ಗೆ ಎಚ್ಚರವಾಗಿ ನೋಡಿದಾಗ ಮಹೇಶಪ್ಪ ಮೃತಪಟ್ಟಿರುವುದು ಬೆಳಕಿಗೆ ಬಂದಿತ್ತು.

ಹೀಗಾಗಿ ಬೆಳಗಿನ ಜಾವ ಕಾರು, ಮೃತದೇಹ, ಹಲ್ಲೆ ಮಾಡಿದ್ದ ರಾಡ್ ಸಹಿತ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ಆಗಮಿಸಿದ್ದ ರಾಜಶೇಖರ ಪೊಲೀಸರಿಗೆ ಶರಣಾಗಿದ್ದು ಆತನನ್ನು ಬಂಧಿಸಿ ಕೇಸ್ ದಾಖಲಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಆರೋಪಿ ರಾಜಶೇಖರ ವಿಚಾರಣೆಯಲ್ಲಿ ಮಹೇಶಪ್ಪ ಸುಮಾರು ಒಂದೂವರೆ ಕೋಟಿ ರೂ. ಹಣ ವಂಚನೆ ನಡೆಸಿದ್ದು ಅದರಿಂದಾಗಿ ಆಕ್ರೋಶಗೊಂಡು ಕೃತ್ಯ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.

Join Whatsapp
Exit mobile version