Home ಟಾಪ್ ಸುದ್ದಿಗಳು ಭೋಪಾಲ್-ಉಜ್ಜೈನಿ ರೈಲು ಸ್ಫೋಟ ಪ್ರಕರಣ: 7 ಮಂದಿಗೆ ಮರಣದಂಡನೆ

ಭೋಪಾಲ್-ಉಜ್ಜೈನಿ ರೈಲು ಸ್ಫೋಟ ಪ್ರಕರಣ: 7 ಮಂದಿಗೆ ಮರಣದಂಡನೆ

ಲಕ್ನೋ: ಭೋಪಾಲ್-ಉಜ್ಜೈನ್ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಎನ್’ಐಎ ವಿಶೇಷ ನ್ಯಾಯಾಲಯ ಮಂಗಳವಾರ 7 ಮಂದಿಗೆ ಮರಣ ದಂಡನೆ ವಿಧಿಸಿದೆ. ಮತ್ತೋರ್ವ ಅಪರಾಧಿಗೆ ಜೀವಾವಧಿ ಶಿಕ್ಷೆ ನೀಡಿದೆ.


ಮುಹಮ್ಮದ್ ಫೈಝಲ್, ಗೌಸ್ ಮುಹಮ್ಮದ್ ಖಾನ್, ಅಝ್ಗರ್, ಆತಿಫ್ ಮುಝಫ್ಫರ್, ದಾನಿಶ್, ಮಿರ್ ಹುಸೈನ್, ಆಸಿಫ್ ಇಕ್ಬಾಲ್ ಎಂಬವರಿಗೆ ಮರಣದಂಡನೆ ಹಾಗೂ ಆತಿಫ್ ಇರಾಕಿ ಎಂಬಾತನಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಲಾಗಿದೆ.


2017, ಮಾರ್ಚ್ 7ರಂದು ಭೋಪಾಲ್-ಉಜ್ಜೈನಿ ಪ್ಯಾಸೆಂಜರ್ ರೈಲಿನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು.

Join Whatsapp
Exit mobile version