ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರವೇಶಿಸಿದ್ದು, ಕಥುವಾ ಅತ್ಯಾಚಾರಿಗಳನ್ನು ಬೆಂಬಲಿಸಿದ್ದ ಲಾಲ್ ಸಿಂಗ್ ಭಾಗಿಯಾಗಿದ್ದಾರೆ.
ಲಾಲ್ ಸಿಂಗ್ 2018ರಲ್ಲಿ ಜಮ್ಮುವಿನ ಕಥುವಾ ಗ್ರಾಮದಲ್ಲಿ 8 ವರ್ಷದ ಮಗುವಿನ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಆರೋಪಿಯನ್ನು ಬೆಂಬಲಿಸಿ ಮೆರವಣಿಗೆ ನಡೆಸುವ ಮೂಲಕ ವಿವಾದಕ್ಕೆ ಸಿಲುಕಿದ್ದ.
ಲಾಲ್ ಸಿಂಗ್ ತಡವಾಗಿ ಬಂದಿದ್ದರಿಂದ ವೇದಿಕೆಯಲ್ಲಿ ಹಾಜರಿರಲಿಲ್ಲ ಹಾಗೂ ಸಮಾರಂಭದುದ್ದಕ್ಕೂ ಜನರೊಟ್ಟಿಗೆ ನಿಂತಿರುವುದು ಕಂಡುಬಂದಿತು.