ನವದೆಹಲಿ: ವಿವಾದಿತ ಕೇಂದ್ರ ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಕರೆ ನೀಡಿರುವ ಭಾರತ್ ಬಂದ್ ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉತ್ತಮ ಸ್ಪಂದನೆ ದೊರಕಿದ್ದು ಸಂಪೂರ್ಣ ಸ್ತಬ್ಧಗೊಂಡಿದೆ. ದೆಹಲಿ ಗಡಿ ಭಾಗಗಳಲ್ಲಿ ಪ್ರತಿಭಟನೆಯ ಕಾವು ಜೋರಾಗಿದೆ.
ವಾಹನ ಸಂಚಾರಗಳು ಸ್ಥಗಿತಗೊಂಡಿದ್ದು ರೈತ ಸಂಘಟನೆಗಳು ಉತ್ತರಪ್ರದೇಶ ದೆಹಲಿಯ ರಾಷ್ಟ್ರಿಯ ಹೆದ್ದಾರಿಯನ್ನು ತಡೆ ಹಿಡಿದಿದೆ. ದೆಹಲಿಯ ಬಹುತೇಕ ಎಲ್ಲಾ ಸಂಸ್ಥೆಗಳು ಬಂದ್ ಕಾರಣ ಮುಚ್ಚಲ್ಪಟ್ಟಿದ್ದು ದೆಹಲಿ ಸ್ತಬ್ಧಗೊಂಡಿದೆ. ಕಳೆದ ಒಂದು ವರ್ಷಗಳಿಂದ ರೈತ ವಿರೋಧಿ ಕಾಯ್ದೆಯ ವಿರುದ್ಧ ಪ್ರತಿಭಟಿಸುತ್ತಿರುವ ರೈತ ಸಂಘಟನೆಗಳು ಇಂದು ಭಾರತ್ ಬಂದ್ ಗೆ ಕರೆಯನ್ನು ನೀಡಿತ್ತು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರೈತ ನಾಯಕ ರಾಕೇಶ್ ಟಿಕಾಯತ್ ನಮ್ಮ ಬೇಡಿಕೆಯನ್ನು ಸರಕಾರ ಒಪ್ಪದೇ ಇದ್ದಲ್ಲಿ ನಮ್ಮ ಹೋರಾಟ ಒಂದು ವರ್ಷವಲ್ಲ ಹತ್ತು ವರ್ಷ ಮುಂದುವರೆಸಲಿದ್ದೇವೆ ಎಂದು ಎಚ್ಚರಿಸಿದ್ದರು.