ಮಂಗಳೂರು: ಬೈಕಂಪಾಡಿಯಲ್ಲಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ವಿರುದ್ಧ ಇಲ್ಲಿನ ಕಾರ್ಮಿಕರು ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದ್ದಾರೆ.
ಕಂಪೆನಿಯಲ್ಲಿ ಕೆಲಸ ಮಾಡುವ ಡ್ರೈವರ್, ಕ್ಲಿನರ್ ಹಾಗೂ ಮಾಲಿಕರಿಗೆ ಆಗುವ ತೊಂದರೆಯ ಬಗ್ಗೆ ಎರಡು ದಿವಸಗಳಿಂದ ಪ್ರತಿಭಟನೆ ಮುಂದುವರೆದಿದೆ.
ನಮ್ಮ ಬೇಡಿಕೆಯ ಬಗ್ಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ನವರಲ್ಲಿ ಮನವಿ ಮಾಡಿದರೆ ಅಲ್ಲಿನ ಅಧಿಕಾರಿಗಳು ಉಡಾಫೆ ಉತ್ತರ ನೀಡುತ್ತಾರೆ. ಹಬ್ಬ ಹರಿದಿನಗಳಲ್ಲಿ ರಜೆ ನೀಡುವುದಿಲ್ಲ. ಸಂಸ್ಥೆಯಲ್ಲಿ ಸರಿಯಾದ KM ನೀಡದೆ ಚಾಲಕ ಹಾಗೂ ಕ್ಲಿನರ್ ಗಳ ಕುಟುಂಬದ ಜೀವನ ಸಾಗಿಸಲು ತುಂಬಾ ಕಷ್ಟಕರವಾಗಿದೆ. ಅಲ್ಲದೆ ನಮ್ಮನ್ನು ಬೆಳಿಗ್ಗೆ 8 ರಿಂದ ರಾತ್ರಿ 9ರತನಕ ಲೋಡಿಂಗ್ ಗಾಗಿ ಇರಿಸುತ್ತಾರೆ. ಹಾಗಾದರೆ ದೂರದ ಚಾಲಕರು ಮನೆ ಸೇರುವುದು ಹೇಗೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ಆದ್ದರಿಂದ ಎಲ್ಲಾ ಚಾಲಕರ ಕುಟುಂಬ ಬೀದಿ ಬದಿಯಲ್ಲಿ ಬಂದು ನಿಂತಿದೆ. ಆತ್ಮಹತ್ಯೆ ಒಂದೇ ದಾರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಿಮ್ಮಲ್ಲಿ ಮನವಿ ಏನೆಂದರೆ ನಮ್ಮ ಎಲ್ಲ ಚಾಲಕ ಹಾಗೂ ಕ್ಲಿನರ್ ಗಳ ಕುಟುಂಬವನ್ನು ರಕ್ಷಿಸಿ. ಇಲ್ಲದೆ ಹೋದಲ್ಲಿ ಈ ಪ್ರತಿಭಟನೆ ಮುಂದುವರೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.